ಆತ್ಮಹತ್ಯೆಗೆ ಇದೆಂಥಾ ಕಾರಣ...!

Kannada News

13-11-2017 1051

ಚಿಕ್ಕಬಳ್ಳಾಪುರ: ತವರು ಮನೆಗೆ ಕಳಿಸದಿದ್ದಕ್ಕೆ ಕುಪಿತಗೊಂಡ ಮಹಿಳೆಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ. ಅರ್ಚನ(23) ನೇಣಿಗೆ ಶರಣಾದ ಮಹಿಳೆ. ಬೈಚಾಪುರ ಗ್ರಾಮದ ಭರತ್ ಮತ್ತು ಅರ್ಚನ ಮದುವೆಯಾಗಿ ಒಂದು ವರ್ಷ ಒಂದು ತಿಂಗಳಷ್ಟೇ ಆಗಿದ್ದು, ಅರ್ಚನ ತವರು ಮನೆ ಮಧುಗಿರಿ ತಾಲ್ಲೂಕಿನ ಬೂದಿನಹಳ್ಳಿಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಇಟ್ಟುಕೊಂಡಿದ್ದರು.

ಇಲ್ಲಿಗೆ ತೆರಳಲು ಅರ್ಚನಾ ಸಿದ್ದಳಾಗಿದ್ದಾಳೆ, ಗಂಡ ಮತ್ತು ಮನೆಯವರು ರಾತ್ರಿ ಪ್ರಯಾಣ ಬೇಡ ಬೆಳಗ್ಗೆ ಹೋಗುವೆ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಬೆಳಗಿನ ಜಾವ ಗಂಡ ಭರತ್ ಹೊಲದ ಬಳಿ ಹೋಗಿ ಬರುವಷ್ಟರಲ್ಲಿ ಮನೆಯ ಮೇಲ್ಚಾವಣಿಗೆ ಅರ್ಚನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸ್ಥಳಕ್ಕೆ ತಹಸೀಲ್ದಾರ್ ಎಂ.ನಾಗರಾಜ್, ಗ್ರಾಮಾಂತರ ಠಾಣೆಯ ಎಸೈ ಅವಿನಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  


ಸಂಬಂಧಿತ ಟ್ಯಾಗ್ಗಳು

Suicide Chikkaballapur ಆತ್ಮಹತ್ಯೆ ಪರಿಶೀಲನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ