ಎಂಇಎಸ್ ಮುಖಂಡರಿಗೆ ನಿಷೇಧ..

13-11-2017 203
ಬೆಳಗಾವಿ: ಎಂದಿನಂತೆ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗುವ ದಿನ ಎಂಇಎಸ್ ನವರು ನಡೆಸುವ ಮಹಾಮೇಳಾವ್ ಕ್ಕೆ ಬೆಳಗಾವಿ ಜಿಲ್ಲಾಡಳಿತ, ಮಹಾರಾಷ್ಟ್ರದ ಎಂಇಎಸ್ ಮುಖಂಡರು, ಅಲ್ಲಿನ ವಿವಿಧ ರಾಜಕೀಯ ನೇತಾರರು ಬೆಳಗಾವಿ ಪ್ರವೇಶಿಸುವುದಕ್ಕೆ ನಿಷೇಧ ಹೇರಿದೆ.
ಮಹಾಮೇಳಾವ್ ಗೆ ಯಾವುದೇ ರೀತಿಯ ಅನುಮತಿ ಅಧಿಕೃತವಾಗಿ ನೀಡದೇ ಇದ್ದರೂ ಸಹ, ಎಂಇಎಸ್ ಶಾಸಕ ಸಂಭಾಜಿ ಪಾಟೀಲ, ಅರವಿಂದ ಪಾಟೀಲ, ದೀಪಕ ದಳವಿ ನೇತೃತ್ವದಲ್ಲಿ ಇಲ್ಲಿನ ಟಿಳಕವಾಡಿ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಇಂದಿನಿಂದ ನಾಳೆ ಮಧ್ಯರಾತ್ರಿವರೆಗೆ ಯಾವುದೇ ಮಹಾರಾಷ್ಟ್ರದ ರಾಜಕೀಯ ಮುಖಂಡರು ಕರ್ನಾಟಕದೊಳಕ್ಕೆ ಪ್ರವೇಶಿಸದಂತೆ ನಿರ್ಬಂಧ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಸೇಖರ್ ಪಾಟೀಲ, ವಿಪಕ್ಷ ನಾಯಕ ಧನಂಜಯ ಮುಂಡೆ ಮತ್ತಿತರರು ಇಂದಿನ ಮೇಳಾವ್ ದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ಗಡಿ ಭಾಗವಾದ ಕಾಗವಾಡ ಹೊರವೊಲಯದ ಕೊಗನೊಳ್ಳಿ ಚಡಕ್ ಪೋಸ್ಟ್ ಹತ್ತಿರ ಖಾಕಿ ಕೋಟೆಯೇ ನಿರ್ಮಾಣವಾಗಿದೆ. ಇದೇ ವೇಳೆ ಮಹಾರಾಷ್ಟ್ರದಿಂದ ಬರುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.
ಒಂದು ಕಮೆಂಟನ್ನು ಹಾಕಿ