ಗಾರ್ಮೆಂಟ್ಸ್ ನಲ್ಲಿ ಅಗ್ನಿ ಅವಘಡ...

Kannada News

13-11-2017

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕೋಣನಕುಂಟೆ ಕ್ರಾಸ್ ಬಳಿಯ ಮೆಟ್ರೋ ಹಿಂಭಾಗದಲ್ಲಿರುವ ಲೊವೆಬಲ್ ಲಾಂಜರಿ ಗಾರ್ಮೆಂಟ್ಸ್ ಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕಳೆದ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು, ಕಟ್ಟಡದ ನಾಲ್ಕು ಅಂತಸ್ಥಿಗೂ ಆವರಿಸಿತ್ತು. ಇನ್ನು ದುರ್ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಗಾರ್ಮೆಂಟ್ಸ್ ನಲ್ಲಿ ಯಾರು ಇಲ್ಲದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗಾರ್ಮೆಂಟ್ಸ್, ಅಶೋಕ್ ರೆಡ್ಡಿ ಎಂಬುವರಿಗೆ ಸೇರಿದ್ದಾಗಿದೆ. 3೦೦ ಕ್ಕೂ ಹೆಚ್ಚು ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸತತ ಕಾರ್ಯಾಚರಣೆ ನಡೆಸಿರುವ 12ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿವೆ.


ಸಂಬಂಧಿತ ಟ್ಯಾಗ್ಗಳು

Garments Short circuit ಅಗ್ನಿ ಅವಘಡ ಹರಸಾಹಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ