ರಾತ್ರಿ ಇಡೀ ಗ್ರಾಮಸ್ಥರ ಜಾಗರಣೆ...

Kannada News

13-11-2017

ಬೀದರ್: ಬೀದರ್ ಜಿಲ್ಲೆಯ ಹುಮನಾಬಾದ್, ಶಮ್ತಾಬಾದ್ ನಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಿನಗಳ ಹಿಂದಷ್ಟೆ ಈ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, ಈಗ ಮತ್ತೆ ಕಂಪಿಸಿ ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯ ಶಮ್ತಾಬಾದ್ ನಲ್ಲಿ ರಾತ್ರಿ ಮೂರು ಬಾರಿ ಭೂಮಿ ಕಂಪಿಸಿದರಿಂದ ಆತಂಕಕ್ಕೆ ಒಳಗಾದ ಜನ ಮನೆ ಬಿಟ್ಟು ಹೊರ ಬಂದಿದ್ದಾರೆ. ಭೂ ಕಂಪನಕ್ಕೆ ಹೆದರಿ ಹೊರ ಬಂದ ಜನರು, ರಾತ್ರಿ ಇಡೀ ಜಾಗರಣೆಯಲ್ಲೇ ಕಾಲ ಕಳೆದಿದ್ದಾರೆ. ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ್ದು, ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ.


ಸಂಬಂಧಿತ ಟ್ಯಾಗ್ಗಳು

Earth vibration Bidar ಭೂ ಕಂಪನ ಆತಂಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ