ಪವಿತ್ರ ಕಾಶಿ...ಮಲಿನ ವಾತಾವರಣ

Kannada News

13-11-2017

ಕಾಶಿ ಅಥವ ವಾರಣಾಸಿಯನ್ನು ಭಾರತದ ಅತ್ಯಂತ ಪವಿತ್ರ ನಗರ ಎಂದು ಹೇಳಲಾಗುತ್ತದೆ. ಆದರೆ, ಅಲ್ಲಿ ಹರಿಯುವ ಗಂಗಾ ನದಿ ಕಲುಷಿತವಾಗಿದ್ದು, ಅದನ್ನು ಸ್ವಚ್ಛವಾಗಿಸುವ ಕೆಲಸ ಹಲವು ದಶಕಗಳಿಂದ ನಡೆಯುತ್ತಲೇ ಇದ್ದರೂ ಹೆಚ್ಚಿನ ಉಪಯೋಗ ಆಗಿಲ್ಲ.

ಆದರೆ, ಇದೀಗ ವಾರಣಾಸಿ ಬಗ್ಗೆ ಹೊಸದೊಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ವಾರಣಾಸಿ ದೇಶದ 42 ನಗರಗಳ ಪೈಕಿ ಅತ್ಯಂತ ಹೆಚ್ಚಿನ ಮಾಲಿನ್ಯ ಹೊಂದಿರುವ ನಗರವಾಗಿದೆ. ವಾರಣಾಸಿಯಲ್ಲಿನ ವಾತಾವರಣ ದೆಹಲಿ, ಗುರುಗ್ರಾಮ, ಲಖನೌ ಮತ್ತು ಕಾನ್ಪುರಗಳಿಗಿಂತ ಕೆಟ್ಟ ಮಟ್ಟದಲ್ಲಿದೆ ಎಂದು ವರದಿ ಹೇಳುತ್ತದೆ.

ವಾರಣಾಸಿ ಅತ್ಯಂತ ಪವಿತ್ರ ಸ್ಥಳ, ಅಷ್ಟೇ ಪ್ರಮುಖವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸದರಾಗಿ ಆರಿಸಿ ಕಳಿಸಿರುವ ಕ್ಷೇತ್ರ. ಇಂಥ ನಗರದಲ್ಲಿನ ವಾತಾವರಣವೇ ಹದಗೆಟ್ಟು ಹೋಗಿರುವುದು, ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಹೇಗೆ ತಾನೆ ಶೋಭೆ ತರಬಲ್ಲದು?


ಸಂಬಂಧಿತ ಟ್ಯಾಗ್ಗಳು

Narendra Modi Varanasi ಕಾಶಿ ಪವಿತ್ರ ನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ