ಫ್ಲೈಒವರ್ ಮೇಲೆ ಭೀಕರ ಅಪಘಾತ

Kannada News

13-11-2017

ಬೆಂಗಳೂರು: ಅಪರಿಚಿತ ವ್ಯಕ್ತಿಯ ಶವದ ಮೇಲೆ ಸುಮಾರು 150 ಹೆಚ್ಚು ವಾಹನಗಳು ಸಂಚರಿಸಿರುವ ಭೀಕರ ಅಪಘಾತ ಮಡಿವಾಳದ ಬಿಎಟಿಪಿಎಲ್ ಎಲಿವೇಟೆಡ್ ಮೇಲು ಸೇತುವೆ ಮೇಲೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬರಿಗೆ ನಿನ್ನೆ ಮುಂಜಾನೆ ಸುಮಾರು 3 ಗಂಟೆಗೆ ವಾಹನವೊಂದು ಬಂದು ಡಿಕ್ಕಿ ಹೊಡೆದಿದೆ, ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಈ ವೇಳೆಯಲ್ಲಿ ಅಪಘಾತವಾಗಿರುವುದು ಯಾರಿಗೂ ತಿಳಿಯದ ಕಾರಣ ವಾಹನಗಳು ಶವದ ಮೇಲೆ ಹರಿದು ಹೋಗಿವೆ.

ಬೆಳಗ್ಗೆ ಸುದ್ದಿ ತಿಳಿದು ಸಂಚಾರಿ ಪೊಲೀಸರು ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಆದರೆ ಅಷ್ಟರಲ್ಲಿ ಸುಮಾರು 150 ವಾಹನಗಳು ಹರಿದು ಹೋಗಿರುವುದರಿಂದ ವ್ಯಕ್ತಿಯ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದೆ. ನಂತರ ಪೊಲೀಸರು ಆಂಬುಲೆನ್ಸ್ ಗೆ ಕರೆ ಮಾಡಿ ಸಮೀಪದ ಆಸ್ಪತ್ರೆಗೆ ಶವವನ್ನು ರವಾನಿಸಿದ್ದಾರೆ. ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸರಿಯಾದ ಟೋಲ್ ಪೆಟ್ರೋಲಿಂಗ್ ಇಲ್ಲದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಆರೋಪಿಸುತ್ತಿದ್ದಾರೆ. ಆದರೆ ಮೃತಪಟ್ಟಿರುವ ವ್ಯಕ್ತಿ ಯಾರು ಇನ್ನು ತಿಳಿದು ಬಂದಿಲ್ಲ.


ಸಂಬಂಧಿತ ಟ್ಯಾಗ್ಗಳು

flyover Accident ಭೀಕರ ಅಪಘಾತ ಸಂಚಾರಿ ಪೊಲೀಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ