ಕಾಣೆಯಾಗಿದ್ದ ಯುವತಿ: 2 ವರ್ಷ ನಂತರ ಪತ್ತೆ

Kannada News

11-11-2017

ಮಣಿಪಾಲ: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯನ್ನು ಉಡುಪಿಯ ಪೊಲೀಸರು ತಮಿಳುನಾಡು ಕೊಯಮುತ್ತೂರು ಜಿಲ್ಲೆಯ ಶಿವಾನಂದ ಕಾಲೋನಿ ಎಂಬಲ್ಲಿ ಪತ್ತೆ ಹಚ್ಚಿದ್ದಾರೆ. ಪತ್ತೆಯಾದವಳನ್ನು ಬಾಗಲಕೋಟೆ ಮೂಲದ ಬಾಲಪ್ಪ ಎಂಬವರ ಮಗಳು, ಮಂಜುಳಾ(19) ಎಂದು ಗುರುತಿಸಲಾಗಿದೆ. ಈಕೆ 17ವರ್ಷ ಪ್ರಾಯ ಇರುವಾಗ ಅಂದರೆ 2015ರ ಆಗಸ್ಟ್ 25ರಂದು ಅಪಹರಣಕ್ಕೊಳಗಾಗಿರುವುದಾಗಿ ಹೇಳಿ ಆಕೆಯ ಮನೆಯವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದೀಗ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ, ಉಡುಪಿ ಅಪರಾಧ ಪತ್ತೆದಳದ ನಿರೀಕ್ಷಕ ರತ್ನ ಕುಮಾರ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಆಕೆಯನ್ನು ನವೆಂಬರ್ 8ರಂದು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ತನ್ನ ಸ್ವ-ಇಚ್ಛೆಯಿಂದ ಮನೆಯಿಂದ ಹೋಗಿ ತಮಿಳುನಾಡಿನಲ್ಲಿ ಮಂಗಳೂರು ಮೂಲದ ಪವಿತ್ರ ಕುಮಾರ್ ಎಂಬಾತನನ್ನು ವಿವಾಹವಾಗಿದ್ದು, ಈಗ ಆಕೆಗೆ ಒಂದು ಮಗುವಿದೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Manipal Udupi ನಾಪತ್ತೆ ಅಪರಾಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ