ದೆಹಲಿಯಲ್ಲಿ ಒಂದಿನ ಸಮ…ಮತ್ತೊಂದಿನ ಬೆಸ

Kannada News

11-11-2017

ನವದೆಹಲಿ: ದೆಹಲಿಯಲ್ಲಿ ಇದೇ ನವೆಂಬರ್ 13ರಿಂದ ಐದು ದಿನಗಳ ಕಾಲ, ಸಮ ಮತ್ತು ಬೆಸ ನೋಂದಣಿ ಸಂಖ್ಯೆಯ ವಾಹನಗಳು, ದಿನ ಬಿಟ್ಟು ದಿನ ಮಾತ್ರ ಓಡಾಡಲು ಅವಕಾಶ ನೀಡುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟಿನ ಹಸಿರು ಪೀಠ ಅಂಗೀಕಾರ ನೀಡಿದೆ.

ದೆಹಲಿಯಲ್ಲಿನ ವಾತಾವರಣ ತುಂಬಾ ಕೆಟ್ಟಿದ್ದರೂ ಕೂಡ, ಈ ರೀತಿಯ ನಿಯಮಾವಳಿ ಜಾರಿಗೆ ತಡಮಾಡಿದ್ದೇಕೆ ಎಂದು ದೆಹಲಿ ಸರ್ಕಾರವನ್ನು ಪ್ರಶ್ನಿಸಿದ ಹಸಿರುಪೀಠ, ಸಮ ಮತ್ತು ಬೆಸ ಸಂಖ್ಯೆ ವಾಹನಗಳ ಓಡಾಟದ ನಿಯಮವನ್ನು ದ್ವಿಚಕ್ರವಾಹನಗಳು, ಮಹಿಳಾ ಚಾಲಕರು ಮತ್ತು ಸರ್ಕಾರಿ ನೌಕರರು ಹಾಗೂ ಗಣ್ಯ, ಅತಿ ಗಣ್ಯ  ವ್ಯಕ್ತಿಗಳೂ ಸೇರಿ ಎಲ್ಲರಿಗೂ ಅನ್ವಯವಾಗುವಂತೆ ಜಾರಿಗೆ ತರಲು ನಿರ್ದೇಶನ ನೀಡಿದೆ.


ಸಂಬಂಧಿತ ಟ್ಯಾಗ್ಗಳು

odd even supreme court ನೊಂದಣಿ ಹಸಿರು ಪೀಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ