ಟೆಸ್ಟಿಂಗ್ ಏಜೆನ್ಸಿಗೆ ಹಸಿರು ನಿಶಾನೆ

Kannada News

11-11-2017

ನವದೆಹಲಿ: ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಇತರ ವೃತ್ತಿಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ಪರೀಕ್ಷೆ ನಡೆಸುವಲ್ಲಿ ಉಂಟಾಗಿರುವ ಗೊಂದಲ ಮತ್ತು ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್‍ಟಿಎ) ರಚಿಸಬೇಕೆಂಬ ಪಸ್ತಾವನೆಗೆ ಹಸಿರು ನಿಶಾನೆ ತೋರಿದೆ.

ಕೇಂದ್ರದ ಈ ನಿರ್ಧಾರದಿಂದ ಪ್ರವೇಶ ಪರೀಕ್ಷೆ ನಡೆಸಲು ಸ್ವಾಯತ್ತ ಸಂಸ್ಥೆಯೊಂದಕ್ಕೆ ಅಧಿಕಾರ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಹಾಗೂ ಎಂಟ್ರೆನ್ಸ್ ಎಕ್ಸಾಮ್‍ ಗಳನ್ನು ನಡೆಸುವ ಕ್ಲಿಷ್ಟಕರ ಹೊಣೆಗಾರಿಕೆ ಹೊರೆಯಿಂದ ಸಿಬಿಎಸ್‍ಸಿ, ಎಐಸಿಟಿಇ ಮತ್ತು ಇತರ ಸಂಸ್ಥೆಗಳಿಗೆ ನಿರಾಳವಾದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು. ಉನ್ನತ ಮಟ್ಟದ ವಿಶ್ವಾಸಾರ್ಹತೆ, ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಮಾಪನ ಮಾಡುವ ಐಚ್ಚಿಕ, ಬುದ್ದಿಮತ್ತೆ ಮತ್ತು ಇತರ ವಿಷಯಗಳಲ್ಲಿ ತಲೆದೋರುವ ಸಮಸ್ಯೆಗಳನ್ನು ಮೌಲ್ಯಾಂಕನ ಮಾಡಿ, ಜಟಿಲವಾದ ಪ್ರಕ್ರಿಯೆಗಳನ್ನು ಸರಳೀಕರಿಸುವ ಹೊಣೆಗಾರಿಕೆ ಹೊಸದಾಗಿ ರಚನೆಯಾಗಲಿರುವ ಎನ್‍ಟಿಎ ಮೇಲಿರುತ್ತದೆ.


ಸಂಬಂಧಿತ ಟ್ಯಾಗ್ಗಳು

Modi New Delhi ಸಿಬಿಎಸ್‍ಸಿ ಎಐಸಿಟಿಇ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ