ಮೋಸ್ಟ್ ವಾಂಟೆಡ್ ಕಳ್ಳನ ಬಂಧನ

Kannada News

11-11-2017 357

ಬಾಗಲಕೋಟೆ: ಮನೆಗಳ್ಳತನ ಸೇರಿದಂತೆ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರ್ ರಾಜ್ಯ ಕಳ್ಳರ ಕಿಂಗ್ ಪಿನ್ ಒಬ್ಬನನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಅಕ್ಬರ್ ಭೋಸಲೆ(29) ಬಂಧಿತ ಆರೋಪಿ. ಮೋಸ್ಟ್ ವಾಂಟೆಡ್ ಕಳ್ಳನಾಗಿದ್ದ ಈತ, ಸುಮಾರು ಒಂದು ದಶಕಗಳಿಂದ ತಲೆ ಮರಿಸಿಕೊಂಡಿದ್ದ. ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧೆಡೆ ಸುಮಾರು ನೂರಕ್ಕೂ ಹೆಚ್ಚು ಕಳ್ಳತನದಲ್ಲಿ ಈತ ಭಾಗಿಯಾಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಹಿಂದೆ 2013ರಲ್ಲಿ ವಿವಿಧೆಡೆ ಕಳ್ಳತನ ನಡೆಸಿದ ಒಂದು ಗುಂಪಿನ ಎಂಟು ಜನರನ್ನ ಪೊಲೀಸರು ಬಂಧಿಸಿದ್ದರು. ಈತ ಆ ಗುಂಪಿನ ಕಿಂಗ್ ಪಿನ್ ಆಗಿದ್ದ. ಖಚಿತ ಮಾಹಿತಿಯ ಮೇರೆಗೆ ಹುನಗುಂದ ಠಾಣೆಯ ಸಿಪಿಐ ಜೆ.ಕರುಣೇಶಗೌಡ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದಲ್ಲಿ ಈ ಖದೀಮನ್ನು ಬಂಧಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Bagalkot Most Wanted ಮನೆಗಳ್ಳತನ ಮಹಾರಾಷ್ಟ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ