4 ಲಕ್ಷ ಕಾರು, ವ್ಯಾನ್ ಜಪ್ತಿ..

Kannada News

11-11-2017

ತೀರಾ ಹದಗೆಟ್ಟಿರುವ ದೆಹಲಿಯ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ದೆಹಲಿ ಸರ್ಕಾರ ಮುಂದಾಗಿದೆ. ದೆಹಲಿ ಸಾರಿಗೆ ಇಲಾಖೆಯವರು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ 4 ಲಕ್ಷ ಹಳೆಯ ಕಾರುಗಳು, ವ್ಯಾನುಗಳು ಇತ್ಯಾದಿ ನಾಲ್ಕು ಚಕ್ರಗಳ ವಾಹನಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ. 10 ವರ್ಷದಷ್ಟು ಹಳೆಯವಾದ ಡೀಸೆಲ್ ವಾಹನಗಳು ಮತ್ತು 15 ವರ್ಷಗಳಷ್ಟು ಹಳೆಯವಾದ ಪೆಟ್ರೋಲ್ ವಾಹನಗಳನ್ನು ಜಪ್ತು ಮಾಡಲಾಗುತ್ತದೆ.

ದೆಹಲಿಯಲ್ಲಿ ಈಗಾಗಲೇ ಎಲ್ಲಾ ರೀತಿಯ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನೂ ಸ್ಥಗಿತಗೊಳಿಸಲು ಆದೇಶಿಸಲಾಗಿದ್ದು ಇದರ ಜೊತೆಗೆ, ಡೀಸೆಲ್ ಜನರೇಟರ್ ಬಳಕೆಯನ್ನೂ ನಿಷೇಧಿಸಲಾಗಿದೆ. ದೆಹಲಿ ನೆರೆಯ ರಾಜ್ಯಗಳಾದ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ವ್ಯಾಪ್ತಿಯಲ್ಲಿ ರೈತರು ತಮ್ಮ ಹೊಲ ಗದ್ದೆಗಳಲ್ಲಿನ ಕೂಳೆ ಮತ್ತು ಹೊಟ್ಟುಗಳಿಗೆ ಬೆಂಕಿಯಿಡುವುದರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇಷ್ಟು ಕ್ರಮಗಳನ್ನು ಕೈಗೊಳ್ಳಲು, ದೇಶದ ರಾಜಧಾನಿಯಲ್ಲಿನ ಗಾಳಿ ಸಂಪೂರ್ಣವಾಗಿ ಕೆಟ್ಟು, ವಿಷಗಾಳಿಯಾಗಿ ಪರಿಣಮಿಸಿ ಜನರನ್ನು ಉಸಿರುಗಟ್ಟಿಸಿ ಕೊಲ್ಲುವ ಹಂತಕ್ಕೆ ಹೋಗುವವರೆಗೂ ಸುಮ್ಮನೆ ಇದ್ದುಬಿಟ್ಟಿದ್ದು ಮಾತ್ರ, ದೆಹಲಿ ಸರ್ಕಾರ ಮತ್ತು ಅಲ್ಲೇ ನೆಲೆಸಿರುವ ಕೇಂದ್ರ ಸರ್ಕಾರದ ದೊಡ್ಡ ವೈಫಲ್ಯ.


ಸಂಬಂಧಿತ ಟ್ಯಾಗ್ಗಳು

Delhi NGT ಮಾಲಿನ್ಯ ನಿಯಂತ್ರಣ ಪೆಟ್ರೋಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ