ನಿಧಿ: ಬಲಿಯಾಗಬೇಕಿದ್ದ ಯುವಕ ರಕ್ಷಣೆ

Kannada News

11-11-2017

ಮೈಸೂರು: ನಿಧಿ ಇದೆ ಎಂದು ಜಮೀನಿನಲ್ಲಿ ಗುಂಡಿ ತೋಡಿ ಯುವಕನನ್ನು ಜೀವಂತ ಮುಚ್ಚಿಹಾಕುವ ವಿಫಲ ಯತ್ನ ಮೈಸೂರಿನಲ್ಲಿ ನಡೆದಿದೆ. ಈ ಕೃತ್ಯ ಎಸಗುವ ವೇಳೆ ಪಕ್ಕದ ಜಮೀನಿನ ಮಾಲೀಕ ಪೊಲೀಸರಿಗೆ ದೂರವಾಣಿ ಕರೆ ಮೂಲಕ ವಿಷಯ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೇರಳ ಮೂಲದ ಪ್ರಸಿದ್ಧ ಜ್ಯೋತಿಷ್ಯರನ್ನೊಳಗೊಂಡ ಒಂಬತ್ತು ಜನರ ತಂಡದೊಂದಿಗೆ ಯುವಕನನ್ನು ಜೀವಂತವಾಗಿ ಮುಚ್ಚಲು ಮುಂದಾಗಿ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ನೇರಳೆ ಗ್ರಾಮದ ಶಿವಪ್ಪ ಎಂಬಾತನ ಜಮೀನಿನಲ್ಲಿ ನಿಧಿ ಇದೆ ಎಂದು, ಗುಂಡಿ ತೋಡಿ ಯುವಕನನ್ನು ಸಜೀವ ಸಮಾಧಿ ಮಾಡಲು ಕೇರಳ ಮೂಲದ ಒಂಬತ್ತು ಜನರು ಸಂಚು ಹೂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಮೀನಿನ ಮಾಲೀಕ ಶಿವಪ್ಪ ಎಂಬಾತನ ಮಗನಾದ ಸುಧೀಂದ್ರ ಹಾಗೂ ಇತರೆ ಗ್ರಾಮದ ಮೂರು ಜನ ಯುವಕರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ನಿಧಿಗಾಗಿ ತೋಡಿದ್ದ ಗುಂಡಿ ಹಾಗೂ ಜ್ಯೋತಿಷ್ಯಕ್ಕೆ ಬಳಸುವ ಹಲವಾರು ವಸ್ತುಗಳು ಪತ್ತೆಯಾಗಿದೆ. ಮಲಯಾಳಿ ಭಾಷೆಯ ಜ್ಯೋತಿಷ್ಯದ ಪಂಚಾಂಗಗಳು ಇತರೆ ಪ್ರಮುಖ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ನಂಜನಗೂಡು ತಾಲ್ಲೂಕಿನ ನೇರಳೆ ಮತ್ತು ಹೆಮ್ಮರಗಾಲದ ಮುಖ್ಯರಸ್ತೆಯಲ್ಲಿರುವ ಶಿವಪ್ಪನ ಜಮೀನಿನಲ್ಲಿ ಈ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Mysore Astrology ನಿಧಿ ಸಜೀವ ಸಮಾಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ