7 ಮಂದಿ ಪ್ರಾಣಾಪಾಯದಿಂದ ಪಾರು..

Kannada News

10-11-2017

ಬೆಂಗಳೂರು: ದೇವನಹಳ್ಳಿಯ ಚಿಕ್ಕಸಣ್ಣೆ ಬಳಿ ಇಂದು ಬೆಳಿಗ್ಗೆ ವೇಗವಾಗಿ ಹೋಗುತ್ತಿದ್ದ ಹೋಂಡಾಸಿಟಿ ಕಾರು, ರಸ್ತೆ ವಿಭಜಕ ದಾಟಿ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಓರ್ವ ಮೃತಪಟ್ಟಿದ್ದರೆ, 7 ಮಂದಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಕೋಡಿಹಳ್ಳಿಯ ರೈತ ಅಂಜನಪ್ಪ (55)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಗಾಯಗೊಂಡಿರುವ ಇಬ್ಬರು ಮಕ್ಕಳು ಸೇರಿ 7 ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವನಹಳ್ಳಿಯಿಂದ ಬೆಂಗಳೂರು ಕಡೆಗೆ ಆಂಜಿನಪ್ಪ ಸೇರಿ 8 ಮಂದಿ ಸಂಬಂಧಿಕರ ವಿವಾಹಕ್ಕೆ ಇನೋವಾ ಕಾರಿನಲ್ಲಿ ಬೆಳಿಗ್ಗೆ 8.50ರ ವೇಳೆ ಹೋಗುತ್ತಿದ್ದಾಗ, ದೇವನಹಳ್ಳಿ ಕಡೆಗೆ ವೇಗವಾಗಿ ಬರುತ್ತಿದ್ದ ಹೋಂಡಾಸಿಟಿ ಕಾರು ಚಿಕ್ಕಸಣ್ಣೆ ಗೇಟ್ ಬಳಿ ರಸ್ತೆ ವಿಭಜಕ ದಾಟಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಜನಪ್ಪ ಅವರಿಗೆ ತಲೆಗೆ ಗಂಭೀರವಾಗಿ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟರೆ, ಉಳಿದವರು ಪಾರಾಗಿದ್ದಾರೆ. ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ


ಸಂಬಂಧಿತ ಟ್ಯಾಗ್ಗಳು

Accident Devanahalli ರಸ್ತೆ ವಿಭಜಕ ಇನೋವಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ