ಕಾಂಗ್ರೆಸ್ ನಾಯಕರ ಧಿಮಾಕು…

Kannada News

10-11-2017

ರಾಜ್ಯದ ಕಾಂಗ್ರೆಸ್ ಮುಖಂಡರು ಮತ್ತು ಸಚಿವರು ಜನರ ಕೈಗೆ ಸಿಗದಂತೆ ನಟಿಸುತ್ತಿದ್ದಾರಾ? ಇಂಥ ಅನುಮಾನಗಳು ಹುಟ್ಟಿಕೊಳ್ಳಲು ಹಲವಾರು ಕಾರಣಗಳು ಸಿಗುತ್ತವೆ. ಕೆಲವು ಸಚಿವರು ಜನರ ಕೈಗೆ ಸಿಗುವುದೇ ಕಷ್ಟವಾಗಿದೆ. ಹುಟ್ಟುವಾಗಲೇ ಕಿವಿಗೆ ಫೋನ್‌ ಇಟ್ಟುಕೊಂಡುಬಂದವರಂತೆ ವರ್ತಿಸುವ ಇನ್ನೂ ಕೆಲವು ಸಚಿವರುಗಳಂತೂ, ಯಾವುದೇ ಸಮಯದಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಕೂಡ ಬಿಝಿಯಾಗಿದ್ದಾರೆ ಎಂದೇ ಅವರ ಸಹಾಯಕರು ಹೇಳುತ್ತಾರೆ. ಉಡಾಫೆ ಉತ್ತರ ನೀಡುವುದರಲ್ಲಿ, ಧಿಮಾಕು ತೋರುವುದರಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು ನಿಷ್ಣಾತರು. ಯಾವಾಗಲೂ ತಮ್ಮ ಜೊತೆಗೆ ಚೇಲಾಗಳನ್ನಿಟ್ಟುಕೊಂಡಿರುವ ಸಚಿವರುಗಳು, ತಮ್ಮ ಸುತ್ತಲೂ ಒಂದು ರೀತಿಯ ಮಾನವ ಗೋಡೆ ನಿರ್ಮಿಸಿಕೊಂಡು ಅದರೊಳಗೆ ಸೇರಿಕೊಂಡುಬಿಟ್ಟಿರುತ್ತಾರೆ.

ಇಷ್ಟು ಸಾಲದು ಎಂಬಂತೆ, ‘ನೀವೂ ಕೂಡ ಸುಲಭವಾಗಿ ಜನರ ಕೈಗೆ ಸಿಗಬೇಡಿ’ ಎಂದು ಬಿಜೆಪಿ ಮುಖಂಡರಿಗೂ ಕೆಲವು ಕಾಂಗ್ರೆಸ್ ಮುಖಂಡರು ಉಪದೇಶಿಸುತ್ತಿದ್ದಾರಂತೆ. ಲೋಕಸಭಾ ಚುನಾವಣೆಯಲ್ಲಿ ಮತ್ತು ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಸೋತು ಸುಣ್ಣವಾಗಿದ್ದರೂ ಕೂಡ, ಕಾಂಗ್ರೆಸ್ ನಾಯಕರು ಇನ್ನೂ ಬುದ್ಧಿಕಲಿತಂತೆ ಕಾಣುವುದಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ