ಲಾರಿ ಡಿಕ್ಕಿ ದಂಪತಿ ಸಾವು !

Kannada News

10-11-2017

ಬೆಂಗಳೂರು: ಸೂರ್ಯನಗರದ ಹಳೇ ಚಂದಾಪುರ ಬಳಿ ನಿನ್ನೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಗಂಡ ಹಾಗೂ ಹೆಂಡತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ನೆರಳೂರು ಗ್ರಾಮದ ಅಶೋಕ್ ಯಾದವ್(45), ಮಂಜುಳ(35)ಎಂದು ಮೃತರನ್ನು ಗುರುತಿಸಲಾಗಿದೆ. ನಿನ್ನೆ ಹತ್ತಿರದ ಶಾಲೆಗೆ ಮಗನನ್ನು ಬಿಟ್ಟು ಮನೆಗೆ ಬೈಕ್‍ನಲ್ಲಿ  ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಹಳೇ ಚಂದಾಪುರದ ಬಳಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹಳೇ ಚಂದಾಪುರ ಬಳಿಯಿರುವ ಮುಖ್ಯ ರಸ್ತೆಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಬೇಲಿಯನ್ನು ಕೆಲವರು ಕಿತ್ತು ರಸ್ತೆ ಮಾಡಿಕೊಂಡಿದ್ದು, ಅದರಿಂದ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

Accident Kannada News ಲಾರಿ ಡಿಕ್ಕಿ ದುರ್ಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ