ಸಿಎಂ ವಿರುದ್ಧ ಕಾಂಗ್ರೆಸ್ ಶಾಸಕ ಅಸಮಾಧಾನ

Kannada News

10-11-2017

ವಿಜಯಪುರ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಇಂದು ವಿಜಯಪುರದ ಇಂಡಿಗೆ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗು ವಿಜಯಪುರದ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ, ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ತಮಗೆ ಸಚಿವ ಸ್ಥಾನ ಕೈ ತಪ್ಪಲು ಜಿಲ್ಲೆಯ ಸಚಿವರ ಕೈವಾಡವಿದ್ದು ನನಗೆ ಅದರ ಬಗ್ಗೆ ಈಗಲೂ ಅಸಮಾಧಾನ ಇದೆ ಎಂದಿದ್ದಾರೆ. ಅಲ್ಲದೆ ಈ ಅಸಮಾಧಾನ ಮುಂದೆಯು ಇರುತ್ತೆದೆ ಎನ್ನುವ ಮೂಲಕ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ.

ಇನ್ನು ಇದೇ ರೀತಿ ಶಿವಾನಂದ ಪಾಟೀಲ ಒಂದು ವರ್ಷದ ಹಿಂದೆಯೂ ಕೂಡ ಕಾಂಗ್ರೆಸ್ ಹೈಕಮಾಂಡ, ಸಿದ್ದರಾಮಯ್ಯ ಸೇರಿದಂತೆ ಸಚಿವ ಎಂ.ಬಿ.ಪಾಟೀಲ ವಿರುದ್ಧ ಹರಿಹಾಯ್ದು ಅಸಮಾಧಾನ ಹೊರ ಹಾಕಿದ್ದರು. ಇನ್ನು ಅದೇ ರೀತಿ ಈಗಲು ಕೂಡ ಅಸಮಾಧಾನ ಹೊರಹಾಕಿರುವ ಶಿವಾನಂದ ಪಾಟೀಲ್, ಮುಂಬರುವ ಚುನಾವಣೆ ವೇಳೆಗೆ ಇದು ಯಾವ ರೂಪ ಪಡೆಯುತ್ತದೆ ಅನ್ನೋದನ್ನ ಕಾದು ನೋಡಬೇಕು. ಇದರ ನಡುವೆಯೇ ಶಿವಾನಂದ ಪಾಟೀಲ ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದು, ಶಿವಾನಂದ ಪಾಟೀಲರು ಕೂಡ ಇದಕ್ಕೆ ಕಾದು ನೋಡಿ ಎಂಬ ಪ್ರತಿಕ್ರಿಯೆ ನೀಡಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ