ಮಗಳೊಂದಿಗೆ ತಾಯಿ ಆತ್ಮಹತ್ಯೆ..

Kannada News

10-11-2017

ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆ, ಮೈಸೂರಿನ ಹುಣಸೂರು ತಾಲ್ಲೂಕು ಮುದಗನೂರು ಗ್ರಾಮದಲ್ಲಿ ಮಗು ಸಮೇತ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮುದಗನೂರು ಗ್ರಾಮದ ಪ್ರಶಾಂತ್ ಎಂಬುವರ ಪತ್ನಿ ಮಹಾಲಕ್ಷ್ಮಿ (ಖುಷಿ) ಎಂಬುವರು ತನ್ನ ಒಂದು ವರ್ಷದ ಹೆಣ್ಣು ಮಗು ಪಿಂಕು ಜೊತೆ ನೇಣಿಗೆ ಕೊರಳೊಡ್ಡಿದ್ದಾಳೆ. ಮಹಾಲಕ್ಷ್ಮಿ ಅವರು ಸಮೀಪದ ಕೊಳವಿಗೆ ಗ್ರಾಮದ ಆಶ್ರಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪ್ರಶಾಂತ್ ಜೊತೆ ಆಕೆಯ ಮದುವೆಯಾಗಿತ್ತು. ಪತಿ ಹಾಗೂ ಪತ್ನಿ ನಡುವೆ ಸಾಮರಸ್ಯದ ಕೊರತೆ ಮತ್ತು ಕಲಹದ ಹಿನ್ನೆಲೆಯಲ್ಲಿ ಆಕೆ ಮಗು ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Mysore ಹುಣಸೂರು ಆತ್ಮಹತ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ