ವಿವಾದಿತ ಪೂಜೆಗೆ ಸ್ವಾಮೀಜಿ ಸ್ಪಷ್ಟನೆ

Kannada News

09-11-2017

ಬೆಂಗಳೂರು: ಲಿಂಗದ ಮೇಲೆ ಸ್ವಾಮೀಜಿ ಪಾದವಿಟ್ಟು ಪೂಜೆ ನೆರವೇರಿಸಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಮೌನವ್ರತದಲ್ಲಿರುವ ಮಲಯಶಾಂತ ಮುನಿಶ್ರೀ ಅವರು ಲಿಖಿತ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಏಳೆಯುವ ಪ್ರಯತ್ನ ನಡೆಸಿದ್ದಾರೆ.

ಶಿಲೆಯ ಅಂಶ ಹೋಗಿ ದೈವತ್ವ ಸ್ಥಾಪಿಸುವ ಪ್ರಕ್ರಿಯೆ ಇದಾಗಿದ್ದು ವೀರಶೈವ ಪದ್ಧತಿ ಪ್ರಕಾರ ನಡೆದಿದೆ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ. ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗ್ರಾಮದಲ್ಲಿ ನೂತನ ಸಮಾಧಾನ ಹೆಸರಿನ ಶಾಖಾ ಮಠದ ಉದ್ಘಾಟನೆ ಸಂದರ್ಭದಲ್ಲಿ ಲಿಂಗದ ಮೇಲೆ ಪಾದಗಳನ್ನಿಟ್ಟು ಕಲಬುರಗಿ ಜಿಲ್ಲೆಯ ನಿಂಬಾಳ ಗ್ರಾಮದ ಶಾಂತಲಿಂಗೇಶ್ವರ ವಿರಕ್ತಮಠದ, ಶ್ರೀ ಜಡೆಯ ಶಾಂತಲಿಂಗೇಶ್ವರರು ಪೂಜೆ ನೆರವೇರಿಸಿದ್ದರು. ಇದಕ್ಕೆ ಕೆಲವರಿಂದ ಆಕ್ರೋಶ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಮೌನ ವ್ರತದಲ್ಲಿರುವ ಮೇಲಣಗವಿ ಮಠದ ಮಲಯಶಾಂತ ಮುನಿ ಸ್ವಾಮೀಜಿ, ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವೀರಶೈವ ಪದ್ಧತಿ ಪ್ರಕಾರ ಈ ಪೂಜೆಯನ್ನು ನೆರವೇರಿಸಲಾಗಿದೆ. ನೆಲಮಂಗಲದ ಸಮಾಧಾನ ಮಠದಲ್ಲಿ ಶಾಖಾ ಮಠದ ಉದ್ಘಾಟನೆ ವೇಳೆ ಘಟನೆ ನಡೆದಿದ್ದು ನಿಜ. ಶಿಲೆಯ ಅಂಶ ಹೋಗಿ ದೈವತ್ವ ಸ್ಥಾಪಿಸುವ ಪ್ರಕ್ರಿಯೆ ಎಂದಿದ್ದಾರೆ.

ಕಳೆದ ಭಾನುವಾರ ನೆಲಮಂಗಲ ತಾಲೂಕು ಕೆರೆಕತ್ತಿಗನೂರು ಸಮಾಧಾನ ಮಠದ ಉದ್ಘಾಟನೆ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಲ್ಲಿ ಮಠದ ಅಪಾರ ಜನಸ್ಥೋಮವೇ ನೆರದಿತ್ತು. ಹಲವು ಮಠದ ಸ್ವಾಮೀಜಿಗಳೊಂದಿಗೆ ಸಾವಿರಾರು ಭಕ್ತರು ನೆರದಿದ್ದರು. ಶಿವನ ಆರಾಧಕರಾದ ಇವರು ಮಠದ ಆವರಣದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.

ಈ ದೇವಾಲಯದಲ್ಲಿರುವ ಲಿಂಗದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಲಿಂಗದ ಮೇಲೆ ತಮ್ಮ ಪಾದಗಳನ್ನಿರಿಸಿ ಪೂಜೆ ನೆರವೇರಿಸಿದ್ದರು. ಇದರಿಂದ ಆ ಶಿವಲಿಂಗ ಮೂರ್ತಿಗೆ ಪ್ರಾಣಯಾಮದ ಮೂಲಕ ಶಾಂತಿಯ ಕಾರ್ಯವನ್ನ ನಡೆಸಿದ್ದರು. ಹೀಗಾಗಿ ಅಂದು ಯಾರು ಸಹ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಎರಡು ದಿನಗಳ ನಂತರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬಳಿಕ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಸ್ವಾಮೀಜಿಯಲ್ಲಿ ಸಾಕಷ್ಟು ತಪೋಶಕ್ತಿ ಇದ್ದು ಪ್ರಾಣ ಪ್ರತಿಷ್ಠಾಪನೆ ಮಾಡಲು ಈ ರೀತಿ ಮಾಡುವುದು ಸರ್ವೇ ಸಾಮಾನ್ಯ. ಎಲ್ಲಾ ದೇವಾಲಯಗಳಲ್ಲು ತೆರೆಯನ್ನು ಎಳೆದು ಪೂಜೆ ಪುನಸ್ಕಾರಗಳು ಹಾಗೂ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಆದ್ರೆ ನಮ್ಮ ಸ್ವಾಮೀಜಿಗಳು ಎಲ್ಲರಿಗೂ ತಿಳಿಯುವಂತೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಲಯಶಾಂತ ಮುನಿ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಕಲುಬುರುಗಿ ಜಿಲ್ಲೆ ನಿಂಬಾಳ ಗ್ರಾಮವನ್ನು ಮದ್ಯ ಮುಕ್ತ ಗ್ರಾಮ ಮಾಡಲು ಈ ಸ್ವಾಮೀಜಿ ಸಾಕಷ್ಟು ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಜನರ ಮದ್ಯಪಾನ ನಿಲ್ಲಿಸುವವರೆಗೂ ಗ್ರಾಮಕ್ಕೆ ಬರುವುದಿಲ್ಲ ಎಂದಿದ್ದರು. ಇಂತ ಚಿಂತನೆಯುಳ್ಳ ಸ್ವಾಮೀಜಿ ಲಿಂಗದ ಮೇಲೆ ಕಾಲಿಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಈ ಎಲ್ಲಾ ವಿವಾದಕ್ಕೆ ಮೌನ ತಪಸ್ವಿ ಶ್ರೀಗಳು ತಮ್ಮ ಲಿಖಿತ ಉತ್ತರದ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ