ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಅಕ್ರಮ ಮರಳು ಲಾರಿ

Kannada News

09-11-2017

ಬೆಂಗಳೂರು: ಅಕ್ರಮವಾಗಿ ರಾತ್ರೋರಾತ್ರಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಗ್ರಾಮಸ್ಥರೇ ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಹೊರವಲಯದ  ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರತಿನಿತ್ಯ ರಾತ್ರೋರಾತ್ರಿ ಹೊಸಹಳ್ಳಿ ಸುತ್ತಮುತ್ತ ಮರಳನ್ನು ತೆಗೆದು, ಸಾಗಿಸುತ್ತಿದ್ದು, ಕಳೆದ ರಾತ್ರಿಯೂ ಸಾಗಣಿಕೆ ಮಾಡುವ ವೇಳೆ ದಾಳಿ ನಡೆಸಿದ ಗ್ರಾಮಸ್ಥರು ಲಾರಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷನ ತಮ್ಮನ ಒಡೆತನದ ಲಾರಿಯಲ್ಲಿ ರಾಜಾರೋಷವಾಗಿ ಮರಳು ಸಾಗಿಸುತ್ತಿರುವುದು ಕಂಡು ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸತತ ಮರಳು ಸಾಗಣೆಯಿಂದ ಅಂತರ್ಜಲ ಮಟ್ಟ ಕುಸಿದ ಹಿನ್ನಲೆ ಬೇಸತ್ತು ಗ್ರಾಮಸ್ಥರೇ ಲಾರಿಯನ್ನು ಹಿಡಿದಿದ್ದಾರೆ. ಮರಳು ನುಂಗಣ್ಣರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪೊಲೀಸರಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sand mafia Lorry ಅಂತರ್ಜಲ ಮರಳು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ