ನವ ವಿವಾಹಿತೆ ಆತ್ಮಹತ್ಯೆ

Kannada News

09-11-2017

ಬೆಂಗಳೂರು: ಒಂಭತ್ತು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಧುವೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಚೆನ್ನಮ್ಮನ ಅಚ್ಚುಕಟ್ಟುವಿನ ಇಟ್ಟುಮಡಿನಲ್ಲಿ ನಡೆದಿದೆ.

ಕಾಲ್‍ ಸೆಂಟರ್‍ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಹರ್ಷಿತಾ (25)ಎಂದು ಆತ್ಮಹತ್ಯೆ ಮಾಡಿಕೊಂಡ ವಧುವನ್ನು, ಗುರುತಿಸಲಾಗಿದೆ. ಕಳೆದ ಅಕ್ಟೋಬರ್.30ರಂದು ಹರ್ಷಿತಾ ಅವರಿಗೆ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಚೇತನ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ನಿನ್ನೆಯಷ್ಟೇ ನವದಂಪತಿ ಪ್ರವಾಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿದ್ದರು.

ಬೆಳಗ್ಗೆ ಚೇತನ್ ಹೊರ ಹೋಗಿದ್ದಾಗ ಹರ್ಷಿತಾ ಮನೆಯಲ್ಲೇ ನೇಣುಬಿಗಿದುಕೊಂಡಿದ್ದಾರೆ. ಹರ್ಷಿತಾ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಅವರನ್ನು ವ್ಯವಸ್ಥಿತವಾಗಿ ಪತಿಯ ಮನೆಯ ಕಡೆಯವರು ಕೊಲೆ ಮಾಡಿದ್ದಾರೆ ಎಂದು ಹರ್ಷಿತಾ ಪೋಷಕರು ದೂರು ನೀಡಿದ್ದು, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

call center suicide ಅನುಮಾನಾಸ್ಪದ ಕೊಲೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ