‘ಬಿಜೆಪಿ ಷಡ್ಯಂತ್ರಕ್ಕೆ ನಾವು ಬಲಿಯಾಗಲ್ಲ’

Kannada News

09-11-2017 325

ಬೆಂಗಳೂರು: ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿಗೆ ಯಾವುದೇ ವಿಷಯ ಸಿಗದೆ ಟಿಪ್ಪು ಜಯಂತಿಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ. ಆದರೆ ಬಿಜೆಪಿ ಷಡ್ಯಂತ್ರಕ್ಕೆ ಬಲಿಯಾಗದಂತೆ ನಾವು ಜಾಗುರೂಕತೆ ವಹಿಸಿದ್ದೇವೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಶಾಂತಿಭಂಗ ಮಾಡುವ ಉದ್ದೇಶದಿಂದಲೇ ಟಿಪ್ಪು ಜಯಂತಿ ದಿನದಂದು ಮಂಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಸಬೇಕು ಎಂದು ಪಟ್ಟು ಹಿಡಿದಿದೆ ಎಂದು ವಾಗ್ದಾಳಿ ನಡೆಸಿದರು. ಟಿಪ್ಪು ಜಯಂತಿಗೆ ಅವಕಾಶ ನೀಡದಂತೆ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರಪತಿಗಳಿಗಷ್ಟೇ ಅಲ್ಲ, ಅಮೆರಿಕ ಅಧ್ಯಕ್ಷರಿಗೂ ಪತ್ರ ಬರೆಯಲಿ. ಅದು ಅವರ ಸ್ವಾತಂತ್ರ್ಯ. ರಾಷ್ಟ್ರಪತಿಗಳೇ ಟಿಪ್ಪು ಉತ್ತಮ ಆಡಳಿತಗಾರ ಅಂತ ಹೇಳಿದ್ದಾರೆ. ಆದರೂ ಕೂಡ ಟಿಪ್ಪು ಜಯಂತಿ ಆಚರಣೆ ತಡೆಯಲು ಬಿಜೆಪಿಯವರು ಏನು ಬೇಕಾದರೂ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಟೀಕಿಸಿದರು.ಸಂಬಂಧಿತ ಟ್ಯಾಗ್ಗಳು

U.T. Khader ಷಡ್ಯಂತ್ರ ವಿಕಾಸಸೌಧ Tipu Sultan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ