ಪುಡಿ ರೌಡಿಗೆ ಗುಂಡೇಟು

Kannada News

09-11-2017

ಬೆಂಗಳೂರು: ಬೆನ್ನಟ್ಟಿ ಬಂದ ಪೊಲೀಸರತ್ತ ಲಾಂಗು ಮಚ್ಚು ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿರುವ ಘಟನೆ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇಂದು ಮುಂಜಾನೆ ನಡೆದಿದೆ.

ಪೊಲೀಸರ ಗುಂಡೇಟಿನಿಂದ ಎಡಗಾಲಿಗೆ ಗಾಯಗೊಂಡಿರುವ ಬಸವನಗುಡಿಯ ನಾಗಸಂದ್ರದ ವಿಷ್ಣು ಅಲಿಯಾಸ್ ಭೋಜ(24) ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. ಇಲ್ಲಿಯವರೆಗೆ ರೌಡಿಗಳು ಹಳೆ ಕಳ್ಳರನ್ನು ಗುಂಡು ಹಾರಿಸಿ ಬಂಧಿಸುತ್ತಿದ್ದ ಪೊಲೀಸರು ವಾಹನಗಳನ್ನು ಜಖಂಗೊಳಿಸಿ ಪುಂಡಾಟಿಕೆ ನಡೆಸುತ್ತಿದ್ದ ಆರೋಪಿಯ ಮೇಲೆ ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಭೋಜನ ಜೊತೆಗಿದ್ದ ಆತನ ಸಹಚರರಾದ ನಾಗಸಂದ್ರದ ಪ್ರಮೋದ್.ಶಶಾಂಕ್,ಸಿದ್ದು ಅಲಿಯಾಸ್ ಸಿದ್ದರಾಜ್ ಹಾಗೂ ಮುಬಾರಕ್ ಸೇರಿ ಐವರನ್ನು ಬಂಧಿಸಲಾಗಿದೆ. ಆರೋಪಿ ಭೋಜ ಗ್ಯಾಂಗ್ ಕಟ್ಟಿಕೊಂಡು ಕುಡಿದು ದಾಂಧಲೆ ಮಾಡುತ್ತಾ ಬನಶಂಕರಿಯ ಎ.ಕೆ. ಕಾಲೋನಿ ಬಳಿ 15 ಯಡಿಯೂರು ಕೆರೆ ಸಮೀಪ 3  ಕಾರು-ಆಟೋಗಳ ಗಾಜು ಪುಡಿ ಪುಡಿ ಮಾಡಿ ಜಖಂಗೊಳಿಸಿ ವಿಕೃತ ವರ್ತನೆ ತೋರುತ್ತಿದ್ದು, ಬನಶಂಕರಿ ಬಸವನಗುಡಿಯ ಸುತ್ತಮುತ್ತ ಪುಂಡಾಡಿಕೆ ನಡೆಸಿ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದನು.

ಇದಲ್ಲದೇ ನಿನ್ನೆ ರಾತ್ರಿ, ಸ್ಥಳೀಯರಾದ ಆನಂದ್ ಹಾಗೂ ನೂತನ್ ಗೌಡರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಭೋಜ, ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ತನ್ನ ಸಹಚರರೊಂದಿಗೆ ಇದ್ದಾನೆ ಎಂಬ ಮಾಹಿತಿ ಮೇಲೆ ಬನಶಂಕರಿ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ ಮತ್ತು ಬಸವನಗುಡಿ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಅಲ್ಲಿಗೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರ ಬೆನ್ನಟ್ಟಿ ಬಂದ ಕೂಡಲೇ ತಪ್ಪಿಸಿಕೊಳ್ಳಲು ಕುಡಿದ ಮತ್ತಿನಲ್ಲಿದ್ದ ಭೋಜ ಇನ್ಸ್ ಪೆಕ್ಟರ್ ಶೇಖರ್ ಮತ್ತು ಪುಟ್ಟಸ್ವಾಮಿ ಮೇಲೆ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾನೆ, ಶರಣಾಗುವಂತೆ ಸೂಚಿಸಿದರೂ ಕಿವಿಗೂಡದೇ ಮುನ್ನುಗಿದ್ದಾಗ ಸ್ವಯಂ ರಕ್ಷಣೆಗೆ ಇನ್ಸ್ ಪೆಕ್ಟರ್ ಶೇಖರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದಾಗ ಒಂದು ಗುಂಡು ಭೋಜನ ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ.

ಭೋಜ ಬೀಸಿದ ಮಚ್ಚಿನೇಟಿನಿಂದ ಗಾಯಗೊಂಡಿರುವ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ ಅವರಿಗೂ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಸಿಲಾಗಿದೆ. ಭೋಜ ಎರಡು ಕೊಲೆಯತ್ನ ಸೇರಿದಂತೆ ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ