‘ಐಟಿ ಮೂಲಕ ಡಿಕೆಶಿ ಸೆಳೆಯಲಾಗುವುದಿಲ್ಲ’

Kannada News

09-11-2017

ಹುಬ್ಬಳ್ಳಿ: ಐಟಿ ಅಧಿಕಾರಿಗಳ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯುವ ಆ ಪಕ್ಷದ ನಾಯಕರ ಪ್ರಯತ್ನ ಫಲ ನೀಡುವುದಿಲ್ಲ. ಯಾವ ಆಸೆ ತೋರಿಸಿದರೂ ಅದಕ್ಕೆಲ್ಲ ಡಿ.ಕೆ.ಶಿವಕುಮಾರ್ ಸೊಪ್ಪು ಹಾಕುವುದಿಲ್ಲ, ಕಾರಣ ಅವರು ಹುಟ್ಟು ಕಾಂಗ್ರೆಸ್ಸಿಗರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹುಬ್ಬಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಲವಾರು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಕಾಂಗ್ರೆಸ್ ಸೇರುವ ಆತುರದಲ್ಲಿ ಇದ್ದಾರೆ. ಆದರೆ, ಅವರು ಮೂಲತಃ ಸಂಘ ಪರಿವಾರದವರೋ ಅಲ್ಲವೋ ಎಂಬುದನ್ನು ನೋಡುತ್ತಿದ್ದೇವೆ, ಆರ್.ಎಸ್.ಎಸ್ ನವರಾದರೆ ಅವರಿಗೆ ಕೋಮುವಾದದ ತರಬೇತಿ ಆಗಿರುತ್ತೆ. ಅಂತಹವರನ್ನು ಸೇರಿಸಿಕೊಳ್ಳುವುದಿಲ್ಲ. ಸಂಪರ್ಕದಲ್ಲಿ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಲಾಗದು ಎಂದರು.

ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ನಡೆಯುತ್ತದೆ. ಬಿಜೆಪಿಯವರು ಢೋಂಗಿಗಳು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಅಗಿದ್ದಾಗ ಟಿಪ್ಪು ಮಹಾವೀರ, ಶೂರ ಎಂದು ಹಾಡಿ ಹೊಗಳಿದ್ದರು, ಟಿಪ್ಪು ಕುರಿತಾದ ಪುಸ್ತಕಕ್ಕೆ ಶೆಟ್ಟರ್, ಸದಾನಂದಗೌಡರು ಮುನ್ನುಡಿ ಬರೆದಿದ್ದಾರೆ. ಯಡಿಯೂರಪ್ಪ ಸಹ ಟಿಪ್ಪು ವೇಷಧಾರಿ ಆಗಿರಲಿಲ್ಲವೇ. ಇವರದ್ದು ಎರಡು ನಾಲಿಗೆ ಅಲ್ಲವೇ? ಟಿಪ್ಪು ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು, ಶಿಫಾರಸು ಮಾಡುವುದು ನಮ್ಮ ಕೆಲಸ ಎಂದರು.

ಕಪ್ಪು ಹಣ, ಭ್ರಷ್ಟಾಚಾರ, ಉಗ್ರರಿಗೆ ಹಣ ರವಾನೆ ಹಾಗೂ ನಕಲಿ ನೋಟುಗಳಿಗೆ ಕಡಿವಾಣ ಹಾಕಲು ನೋಟು ಅಮಾನ್ಯ ನಿರ್ಧಾರ ಕೈಗೊಂಡಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು, ಈ ನಾಲ್ಕರಲ್ಲಿ ಒಂದು ಕೆಲಸವಾದರೂ ಆಗಿದೆಯೇ..? ನೋಟು ಅಮಾನ್ಯವಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಅವರು ಮಾಡಿದ್ದೇನು, ಹೀಗಾಗಿಯೇ ಕಾಂಗ್ರೆಸ್ ಕರಾಳ ದಿನ ಆಚರಿಸಿದ್ದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ