ಕೊಡಗಿನಲ್ಲಿ ಕಟ್ಟೆಚ್ಚರ..

Kannada News

09-11-2017 334

ಕೊಡಗು: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ, ಕೊಡವ ಸಮಾಜದವರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಕೊಡಗಿನ ಪೊನ್ನಂಪೇಟೆಯಿಂದ-ವಿರಾಜಪೇಟೆವರೆಗೆ ಅನೇಕ ಕೊಡವ ಸಮಾಜದ ಕಾರ್ಯಕರ್ತರು ವಾಹನ ಜಾಥಾ ನಡೆಸಿದ್ದು, ಪೊಲೀಸರ ಅನುಮತಿ ಪಡೆಯದೆ ಪ್ರತಿಭಟನೆ ಮಾಡುವ ಮೂಲಕ ಹೋರಾಟದ ತೀವ್ರತೆ ಹೆಚ್ಚಿದೆ. ಈಗಾಗಲೇ ಜಿಲ್ಲೆಯಲ್ಲಿ ನೆರೆಯ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಿಂದ ಸಿಆರ್ ಪಿಎಫ್ ತುಕಡಿಗಳು ಬೀಡುಬಿಟ್ಟಿದ್ದು, ಯಾವುದೇ ಅನಾಹುತ ನಡೆಯದಂತೆ ಬಿಗಿ ಬಂದೋಬಸ್ತ್ ಕಾರ್ಯ ನಡೆಸಿದೆ. ಇನ್ನು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಡಳಿತವತಿಯಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ನಾಳೆ ಟಿಪ್ಪು ಜಯಂತಿ ಆಚರಿಸಬಾರದು, ಆಚರಿಸಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.ಸಂಬಂಧಿತ ಟ್ಯಾಗ್ಗಳು

Kannada News Karnataka ಕೊಡವ ಸಮಾಜ ವಿರಾಜಪೇಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ