ಪ್ರಾಣಕ್ಕೆ ಕುತ್ತು ತಂದ ಓದು..

Kannada News

09-11-2017 431

ಬೆಂಗಳೂರು: ಚೆನ್ನಾಗಿ ಓದುವಂತೆ ತಂದೆ-ತಾಯಿ ಹೇಳುತ್ತಿದ್ದ ಬುದ್ಧಿವಾದದಿಂದ ಬೇಸರಗೊಂಡು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆಯು, ನಗರದ ಸೋಲದೇವನಹಳ್ಳಿಯ ಗುಣಿ ಅಗ್ರಹಾರ ಲೇಔಟ್‍ನಲ್ಲಿ ನಡೆದಿದೆ.

ಸೋಲದೇವನಹಳ್ಳಿಯ ಗುಣಿ ಅಗ್ರಹಾರ ಲೇಔಟ್‍ನ ಮಂಜುನಾಥ್ ರೆಡ್ಡಿ(15)ಎಂದು ನೇಣಿಗೆ ಶರಣಾದ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ. ಕಮ್ಮಗೊಂಡನಹಳ್ಳಿಯ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್, ಓದಿನಲ್ಲಿ ಹಿಂದಿದ್ದ ಅಂತ ಆತನ ಪೋಷಕರು ಟ್ಯೂಷನ್‍ಗೆ ಸೇರಿಸಿದ್ದರು. ನಿನ್ನೆ ಸಂಜೆ ಮಂಜುನಾಥ್ ಟ್ಯೂಷನ್ ಮುಗಿಸಿ ಮನೆಗೆ ಬಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಜುನಾಥ್ ತಂದೆ ಚಂದ್ರಶೇಖರ್ ರೆಡ್ಡಿ ಗಾರೆ ಕೆಲಸ ಮಾಡುತ್ತಾರೆ. ತನ್ನ ಮಗ ಚೆನ್ನಾಗಿ ಓದಿ ಉತ್ತಮ ಹುದ್ದೆಗೆ ಹೋಗಬೇಕು ಅಂತ ಆಸೆಯಿಟ್ಟುಕೊಂಡಿದ್ದರು. ಅದಕ್ಕಾಗಿಯೇ ಆತನನ್ನ ಟ್ಯೂಷನ್‍ಗೂ ಸೇರಿಸಲಾಗಿತ್ತು. ಆದರೆ ಓದು ಇಷ್ಟವಿಲ್ಲದ ಮಂಜುನಾಥ್ ಇದೇ ವಿಚಾರಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.ಸಂಬಂಧಿತ ಟ್ಯಾಗ್ಗಳು

Kannada News Karnataka ಟ್ಯೂಷನ್‍ ಬುದ್ಧಿವಾದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ