ಕೆಲಸ ಅರಸಿ ಬಂದವರು ಕಂಬಿ ಹಿಂದೆ !

Kannada News

09-11-2017

ಬೆಂಗಳೂರು: ನಗರದ ವಿವಿದೆಢೆ ಆಟೋದಲ್ಲಿ ಸಂಚರಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವಲ್ಲಿ ತಿಲಕನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 8 ಕೆ.ಜಿ. 135 ಗ್ರಾಂ ತೂಕದ ಗಾಂಜಾ ಮತ್ತು ಆಟೋ ರಿಕ್ಷಾವೊಂದನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಮಲ್ಲಸಂದ್ರದ 1ನೇ ಮುಖ್ಯ ರಸ್ತೆ ನಿವಾಸಿ, ಬಿಹಾರ ಮೂಲದ ಸೂರಜ್ ಕುಮಾರ್ ಕಾಮತ್(38), ಒರಿಸ್ಸಾದ ಬಾಲೇಸ್ವರ್ ಜಿಲ್ಲೆಯ ಜೆಲ್ಲೋಸರ್ ಥಾಣಾದ ಗುಡಿಕಲ್‍ನ ಖುಲೇದ ಗ್ರಾಮದ ನಿವಾಸಿ ಪೂರ್ಣ ಚಂದ್ರನಾಥ್ (45), ನಾಗನಾಥಪುರ ಮೀನಾಕ್ಷಿ ಬಡಾವಣೆಯ 2ನೆ ಕ್ರಾಸ್ ನಿವಾಸಿ ಉತ್ತರ ಪ್ರದೇಶದ ಮೂಲದ ವಿಜಯ್ ಕುಮಾರ್ (35), ಮಾರತ್‍ ಹಳ್ಳಿಯ ರಿಂಗ್ ರಸ್ತೆಯ 9ನೇ ಕ್ರಾಸ್ ನಿವಾಸಿ ಬಿಹಾರ ಮೂಲದ ಕಮಲೇಶ್ ಕುಮಾರ್ ಯಾದವ್ (24) ಬಂಧಿತ ಆರೋಪಿಗಳು.

ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು ಸುಲಭವಾಗಿ ಹಣಗಳಿಸಲು ಒರಿಸ್ಸಾದ ಬಬ್ಲೂ ಎಂಬಾತನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ನಗರಕ್ಕೆ ತಂದು ಸಣ್ಣ ಪೊಟ್ಟಣಗಳಾಗಿ ಕಟ್ಟಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳು ಮೈಕೋ ಲೇಔಟ್ ನಲ್ಲಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದರೂ, ಮತ್ತೆ ಅದೇ ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಆಟೋ ರಿಕ್ಷಾ ದಂಧೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ