'ನನ್ನನ್ನು ಕೆಣಕಬೇಡಿ'

Kannada News

09-11-2017 414

ಹಾಸನ: ಸಿಎಂ‌ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆಂಡಾ ಮಂಡಲವಾಗಿದ್ದಾರೆ. ಒಂದೂವರೆ ವರ್ಷ ದೇವೇಗೌಡರು ರಾಜ್ಯದ ವಿಕಾಸ ಮಾಡಿಲ್ಲವೇ ಎಂಬ, ಸಿಎಂ ಅವರ ವ್ಯಂಗ್ಯ ಮಾತಿಗೆ ದೇವೇಗೌಡರು ಕಿಡಿಕಾರಿದ್ದು, ಮಾತಿನಲ್ಲಿ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ.

ಹಾಸನದ ಅರಸೀಕೆರೆಯಲ್ಲಿ ಮಾತನಾಡಿದ ಅವರು, ನಾನು ಒಂದೂವರೆ ವರ್ಷ ಏನು ಮಾಡಿದೆ ಎಂದು‌ ನೆನಪಿಸಿಕೊಳ್ಳಲಿ, ಬೆಂಗಳೂರು ಐಟಿ‌, ಹಾರ್ಡ್ವೇರ್, ಕೈಗಾರಿಕೆಗೆ, ಶಕ್ತಿ ತುಂಬಿದ್ದು ಯಾರು?ಎಂದು ಪ್ರಶ್ನಿಸಿದ್ದು,  ಹೀಗೆ ಮಾತನಾಡಲು‌ ನಾಚಿಕೆ ಆಗುವುದಿಲ್ಲವೇ? ಎಂದುರು. ನನ್ನ ಕೆಣಕೋದು ಬೇಡ, ನಾನು ಯಾರ ಬಗ್ಗೆಯೂ ಈವರೆಗೂ ಅಗೌರವವಾಗಿ ಮಾತನಾಡಿಲ್ಲ, ನಾನು‌ ಫೌಂಡೇಷನ್ ಹಾಕಿದ ಕೃಷ್ಣಾಯೋಜನೆ ಬಳಕೆ ಮಾಡಲಾಗಿಲ್ಲ ಎಂದು‌ ಆಕ್ರೋಶ ವ್ಯಕ್ತಪಡಿಸಿ, ಇಂಥವರು ವಿಕಾಸದ ಬಗ್ಗೆ ವ್ಯಂಗ್ಯ ಮಾಡುತ್ತೀರಾ ಎಂದು‌ ಸಿಎಂ ವಿರುದ್ಧ ಹರಿಹಾಯ್ದರು.

ಕುಮಾರಸ್ವಾಮಿ ಹೋದ ಕಡೆ ಹಣ ಕೊಟ್ಟು ಜನ‌ ಕರೆದುಕೊಂಡು ಬಂದಿದ್ದಾರಾ..? ಇದು ಅಹಿಂದ ರಾಜಕೀಯ ಅಲ್ಲ, ಅಂಥ ಒಂದು ಕಾರ್ಯಕ್ರಮ ನೀವು ಮಾಡಿ ಎಂದು ಸವಾಲೆಸದ ಅವರು, ಈಗ ಕುಮಾರಸ್ವಾಮಿ ಶಕ್ತಿ ಗೊತ್ತಾಯಿತೇ? ಕುಮಾರಸ್ವಾಮಿ ಒಬ್ಬ ರೈತನ ಮಗ, ನಿಮ್ಮ ಹಣ, ನಿಮ್ಮ‌ ಧಿಮಾಕಿಗೆ ಜನ ಉತ್ತರ ನೀಡಲಿದ್ದಾರೆ, ಸಿಎಂ‌ ವ್ಯಂಗ್ಯ ಮಾತು ನನಗೆ ಹೇಸಿಗೆ ತರಿಸಿದೆ ಎಂದು ಹೇಳಿದರು. ನಿಮಗೆ ತಡೆದುಕೊಳ್ಳಲು ಆಗದಿದ್ದರೆ ಸುಮ್ಮನಿದ್ದು ಬಿಡಿ, ನಾನು ‌ಇಡೀ‌ ರಾಜ್ಯ ಸುತ್ತಿದ್ದೇನೆ, ನನ್ನ ಹೆಸರು ಹೇಳಿ ಯಾವುದೇ ಬಿರುದು ಕೊಡೋದು ಬೇಡ ಎಂದರು.ಸಂಬಂಧಿತ ಟ್ಯಾಗ್ಗಳು

Kannada News Karnataka ಅರಸೀಕೆರೆ ಕೈಗಾರಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ