ಇದ್ದಕ್ಕಿದ್ದಂತೆ ವಾಲಿದ ಕಟ್ಟಡ..!

Kannada News

09-11-2017

ಕೋಲಾರ: ಕೋಲಾರ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಸಿಲ್ಲ. ಇಂದು ಬೆಳಗ್ಗೆ 6.40ರ ಸಮಯದಲ್ಲಿ ಫಲಾಮೃತ ಹೊಟೇಲ್ ಕಟ್ಟಡ ಅಲುಗಾಡಿ ನೆಲ ಅಂತಸ್ತು ಕುಸಿದಿದ್ದು, ಹಾಗೆಯೇ ಪಕ್ಕದ ಕಟ್ಟಡಕ್ಕೆ ವಾಲಿದೆ. 3ನೆ ಅಂತಸ್ತಿನಲ್ಲಿದ್ದ 7 ಮಂದಿಯನ್ನು ರಕ್ಷಿಸಲಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಮನೆಯ ಒಳಗಿದ್ದ ಬಸವರಾಜ್, ಪತ್ನಿ ರೇಷ್ಮಾ, ನಿತಿನ್, ಚಂದನ್, ಕಲ್ಲೇಶ್, ಗೋಪಾಲ್ ಹಾಗೂ ಸಮಿ ಕೂಗಾಡಿದಾಗ ಅಕ್ಕಪಕ್ಕದವರು ಬಂದು ರಕ್ಷಿಸಿದ್ದಾರೆ.

ಘಟನೆ ಕುರಿತು ಬಸವರಾಜ್ ಮಾತನಾಡಿ, 6.40ರ ಸಮಯದಲ್ಲಿ ಭೂಕಂಪವಾದ ಅನುಭವವಾಯಿತು. ಜನ ಕೂಡ ಕೂಗಾಡುತ್ತಿದ್ದರು. ಹಾಗಾಗಿ ಮನೆಯ ಒಳಗಿದ್ದವರೆಲ್ಲ ನೆರೆಹೊರೆಯವರ ಸಹಾಯದೊಂದಿಗೆ ಹೊರಗೆ ಬಂದೆವು ಎಂದು ಹೇಳಿದರು. ಅಗ್ನಿಶಾಮಕ ದಳದ ಅಧಿಕಾರಿ ರಾಘವೇಂದ್ರ ಸೇರಿದಂತೆ 30 ಮಂದಿ ಸಿಬ್ಬಂದಿಯ ತಂಡ ಆಗಮಿಸಿ 3ನೆ ಮಹಡಿಯ ಮನೆ ಒಳಗಿದ್ದ ಗ್ಯಾಸ್ ಸಿಲಿಂಡರ್ ಮತ್ತು ಬೆಲೆಬಾಳುವ ವಸ್ತುಗಳನ್ನು ಹೊರತಂದಿದ್ದಾರೆ. ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಎಂಜಿನಿಯರ್‍ ಗಳ ಸಲಹೆ ಪಡೆದು ವಾಲಿದ ಕಟ್ಟಡವನ್ನು ತೆರವುಗೊಳಿಸಿದರು. ಈ ಕಟ್ಟಡವು 82 ವರ್ಷ ಹಳೆಯದಾಗಿದ್ದು, ವೆಂಕಟಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಕೆಎಸ್‍ಆರ್‍ಟಿಸಿ ಭೂಕಂಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ