ಜೂಜಿಗಾಗಿ ಕಳ್ಳದಾರಿ..

Kannada News

09-11-2017

ಬೆಂಗಳೂರು: ಜೂಜಿಗಾಗಿ ಸರಗಳವು, ವಾಹನ ಕಳವು ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಶಿವಾಜಿನಗರ ಪೊಲೀಸರು 8 ಲಕ್ಷ 15 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪಾದರಾಯನಪುರದ ಇಬ್ರಾಹಿಂ ಪಾಷ ಅಲಿಯಾಸ್ ಕಾಲು (27), ಹೆಗಡೆನಗರದ ಫಯಾಜ್ ಅಹ್ಮದ್ (25) ಹಾಗೂ ಗಿರಿನಗರದ ದೇವರಾಮ್ ಅಲಿಯಾಸ್ ಸುನಿಲ್ (40) ಬಂಧಿತ ಆರೋಪಿಗಳು. ಬಂಧಿತರಿಂದ 395 ಗ್ರಾಂ.ತೂಕದ ಚಿನ್ನದ ಸರಗಳು, 1 ಬೈಕ್ ಸೇರಿ 8 ಲಕ್ಷ 15 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಳೆದ 7 ತಿಂಗಳಿಂದ ಕೆ.ಆರ್.ಪುರ, ಮಡಿವಾಳ, ಶಂಕರಪುರ, ಯಶವಂತಪುರ, ಸುಬ್ರಮಣ್ಯ ನಗರ, ಚಂದ್ರಲೇಔಟ್ ಮತ್ತಿತರ ಕಡೆಗಳಲ್ಲಿ ಮುಂಜಾನೆ ಹಾಗೂ ಸಂಜೆ ವೇಳೆ ಹೊಂಚು ಹಾಕಿ ಒಂಟಿ ಮಹಿಳೆಯರ ಚಿನ್ನಾಭರಣ ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ 9 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳನ್ನು ಖಚಿತ ಮಾಹಿತಿ ಮೇರೆ ಶಿವಾಜಿನಗರ ಪೊಲೀಸ್ ಇನ್ಸ್‍ ಪೆಕ್ಟರ್ ನಾಗರಾಜ್ ಮತ್ತವರ ಸಿಬ್ಬಂದಿ ಬಂಧಿಸಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಜೂಜು ಇನ್ಸ್‍ ಪೆಕ್ಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ