ಪತ್ರಕರ್ತನ ಬಟ್ಟೆ ಹರಿದ ಪಿಎಸ್ಐ..

Kannada News

09-11-2017

ಕೋಲಾರ: ಕೋಲಾರ ನಗರದಲ್ಲಿನ ಮೂರು ಅಂತಸ್ತಿನ ಕಟ್ಟಡ ಕುಸಿತದ ವೇಳೆ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಪಿಎಸ್ಐ ಹಲ್ಲೆ ಮಾಡಿದ್ದಾರೆ. ಖಾಸಗಿ ನ್ಯೂಸ್ ಚಾನಲ್ ನ ವರದಿಗಾರರೊಬ್ಬರ ಮೇಲೆ ಪಿಎಸ್ಐ ಹೊನ್ನೇಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು, ಇಂದು ಬೆಳಿಗ್ಗೆ ಕೋಲಾರ ನಗರದ ಫಲಾಮೃತ ಕಟ್ಟಡ ಕುಸಿದು ಬಿದ್ದಿದ್ದ ಹಿನ್ನೆಲೆ, ವರದಿಗಾರರೊಬ್ಬರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪಿಎಸ್ಐ ವರದಿಗೆ ಅಡ್ಡಿ ಪಡಿಸಿದ್ದು ಅಲ್ಲದೆ, ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಿ, ಠಾಣೆಗೆ ಕರೆತಂದಿದ್ದಾರೆ. ಪತ್ರಕರ್ತರ ಮೇಲಿನ ಈ ಹಲ್ಲೆಯನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದ್ದು, ಪಿಎಸ್ಐ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಪತ್ರಕರ್ತ ಅವಾಚ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ