ಚಿತ್ರದುರ್ಗದಲ್ಲಿ ಖಾಕಿ ಸರ್ಪಗಾವಲು..

Kannada News

09-11-2017

ಚಿತ್ರದುರ್ಗ: ಟಿಪ್ಪು ಜಯಂತಿ ವಿರೋಧಿಸಿ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ, ಚಿತ್ರದುರ್ಗದಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಚಿತ್ರದುರ್ಗ, ಚಳ್ಳಕೆರೆ ನಗರ ಮತ್ತು ಹೊಸದುರ್ಗ ಪಟ್ಟಣದಲ್ಲಿ ಮೂರು ದಿನಗಳು ನಿಷೇಧಾಜ್ಞೆ ಜಾರಿಗೊಳಿಸಿ ಡಿ.ಸಿ ವಿ.ವಿ ಜೋತ್ಸ್ನಾ ಆದೇಶ ಹೊರಡಿಸಿದ್ದಾರೆ. ಕಾನೂನು  ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ, ನವೆಂಬರ್ 10ರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಾಗಿದೆ. ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ  ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಮೂವರು ಎಸ್ಪಿ 8 ಜನ ಡಿವೈಎಸ್ಪಿ ಸೇರಿದಂತೆ ಮೂರು ನಗರಗಳು ಖಾಕಿಮಯವಾಗಿವೆ. 1500 ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲು ಆರ್.ಎ.ಎಫ್, ಸಿ.ಆರ್.ಪಿ.ಎಫ್ ತುಕಡಿಗಳ ನಿಯೋಜನೆ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ನಿಷೇಧಾಜ್ಞೆ ಚಿತ್ರದುರ್ಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ