ಗಗನಸಖಿ ಮೈ ಮುಟ್ಟಿದವನು ಅರೆಸ್ಟ್

08-11-2017 404
ಬೆಂಗಳೂರು: ಗಗನಸಖಿಯೊಬ್ಬರಿಗೆ ವಿಮಾನದಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಕೊಲ್ಕತ್ತಾ ಮೂಲದ ಕ್ಷಿತಿಜ್ ಗುರುಂಗ್ ಬಂಧಿತ ಆರೋಪಿಯಾಗಿದ್ದಾನೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಎಂ.ಟೆಕ್ ವಿದ್ಯಾರ್ಥಿಯಾಗಿದ್ದ ಆರೋಪಿಯು ಇಂಡಿಗೋ ವಿಮಾನದಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಗಗನಸಖಿ ಫೌಜಿಯಾ ಎಂಬಾಕೆಗೆ ಮೈ ಮೇಲೆ ಕೈ ಹಾಕಿದ್ದಾನೆ. ಇದನ್ನು ಮತ್ತೊರ್ವ ಗಗನಸಖಿ ಪ್ರಶ್ನಿಸಿದ್ದು, ಇದರಿಂದ ಸಿಟ್ಟುಗೊಂಡ ಕ್ಷಿತಿಜ್ ಗಗನಸಖಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ವಿಮಾನದ ಸಹಪ್ರಯಾಣಿಕರು ಗಲಾಟೆ ಬಿಡಿಸಿದ್ದಾರೆ.
ಬಳಿಕ ಇಬ್ಬರು ಗಗನಸಖಿಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಗನಸಖಿಯರ ದೂರು ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಒಂದು ಕಮೆಂಟನ್ನು ಹಾಕಿ