ಖೋಟಾನೋಟು ಮೂವರ ಬಂಧನ

Kannada News

08-11-2017

ಬೆಂಗಳೂರು: ಆನೇಕಲ್‍ನಲ್ಲಿ ಖೋಟಾನೋಟು ಮುದ್ರಣ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಕೇರಳ ಪೊಲೀಸರು ಮೂವರು ಯುವಕರನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಬಂಧಿತ ಯುವಕರು ಆನೇಕಲ್ ಸಮೀಪದ ರಾಮಸಾಗರ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಯಾರಿಗೂ ಅನುಮಾನ ಬರದಂತೆ ಮನೆಯಲ್ಲಿಯೇ ನೋಟ್ ಮುದ್ರಣ ನಡೆಸುತ್ತಿದ್ದರು. ಈ ಬಗ್ಗೆ  ಖಚಿತ ಮಾಹಿತಿ ಪಡೆದ ಕೇರಳ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ವೇಳೆ ಲಕ್ಷಾಂತರ ರೂ. ಮೌಲ್ಯದ ಖೋಟಾನೋಟು ಹಾಗೂ ಮುದ್ರಣ ಮಿಷಿನ್ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಕೇರಳಕ್ಕೆ ಕರೆದೊಯ್ಯಲಾಗಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಖೋಟಾನೋಟು ಆನೇಕಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ