‘ನಾವ್ಯಾರೂ ಟಿಪ್ಪು ‌ಜಯಂತಿಗೆ ಹೋಗಲ್ಲ’

Kannada News

08-11-2017 346

ಬೆಂಗಳೂರು: ಸರ್ಕಾರದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ನಾವ್ಯಾರೂ ಟಿಪ್ಪು‌ಜಯಂತಿಗೆ ಹೋಗಲ್ಲ, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ದೇಶ ಪ್ರೇಮಿಯೂ ಅಲ್ಲ, ರಾಜಕಾರಣಕ್ಕಾಗಿ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಕಾಂಗ್ರೆಸ್ ನಿಂದ ಬ್ಲಾಕ್ ಡೇ ಆಚರಣೆ ವಿಚಾರದ ಕುರಿತು, ಯಾರ ಬಳಿ ಬ್ಲ್ಯಾಕ್ ಮನಿ ಇದೆಯೊ ಅವರು ಇವತ್ತು ಬ್ಲಾಕ್ ಡೇ ಆಚರಿಸುತ್ತಿದ್ದಾರೆ ಎಂದು, ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಒಂದು ಜನಪರ ಯೋಜನೆ ಮಾಡಿದ್ದಾರೆ, ನಮ್ಮ ದೇಶ ಕೂಡ ಬೇರೆ ದೇಶದ ಜೊತೆ ಸ್ಪರ್ಧೆಗೆ ನಿಲ್ಲುವಂತಾಗಿದೆ, ಅದರೆ ಇದನ್ನು ಅರಿಯದೆ ಕಾಂಗ್ರೆಸ್, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿದೆ, ಇದು ಸರಿಯಲ್ಲ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ