‘ಭ್ರಷ್ಟಾಚಾರಿಗಳಿಗಾಗೇ ಕಾಂಗ್ರೆಸ್ ಇದೆ’- ಜಾವ್ಡೇಕರ್

Kannada News

08-11-2017

ಕಳೆದ ವರ್ಷ ಪ್ರಧಾನಿ ನರೇಂದ್ರ ‌ಮೋದಿ ಅವರು,‌ ನೋಟ ಅಮಾನ್ಯೀಕರಣ ಮಾಡಿದ್ದು, ಮೋದಿಯವರು ಐತಿಹಾಸಿಕ‌ ನಿರ್ಣಯ ತೆಗೆದುಕೊಂಡಿದ್ದರಿಂದ ದೇಶದ ಜನ ಮೋದಿಯವರ ನಿರ್ಧಾರವನ್ನು ಶ್ಲಾಘಿಸಿದ್ರು, ಹೀಗಾಗಿ ಬಿಜೆಪಿಯಿಂದ ಈ ದಿನ ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸಲಾಗ್ತಿದೆ. ಆದರೆ ಕಾಂಗ್ರೆಸ್ ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿದೆ, ಈ ಮುಖಾಂತರ ಕಾಂಗ್ರೆಸ್ ನವರು ಕಪ್ಪುಹಣಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನೋಟ್ ಬ್ಯಾನ್ ವಿಚಾರವನ್ನು ಸಮರ್ಥಿಸಿಕೊಂಡ ಅವರು, ನೋಟ್ ಬ್ಯಾನ್ ನಂತರ ಡಿಜಿಟಲ್ ಆರ್ಥಿಕತೆ ಬೆಳವಣಿಗೆ ಆಗಿದೆ, ನೋಟ್ ಬ್ಯಾನ್ ಆಗುವ ಮೊದಲು ದೇಶದಲ್ಲಿ ಮೂರು‌ ಕೋಟಿ‌ ಕ್ರೆಡಿಟ್ ಕಾರ್ಡ್ ಇದ್ದವು, ಈಗ ಕ್ರೆಡಿಟ್ ಕಾರ್ಡುಗಳ ಸಂಖ್ಯೆ 23 ಕೋಟಿ ಆಗಿದೆ, ಮತ್ತು ಡೆಬಿಟ್ ಕಾರ್ಡ್ ಗಳ ಸಂಖ್ಯೆಯು ಹೆಚ್ಚಿದೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ, 2G ಹಗರಣ ,ಕಲ್ಲಿದ್ದಲು ಹಗರಣಗಳು ನಡೆದಿದ್ದವು,‌ ಲಕ್ಷಾಂತರ ಕೋಟಿ ಮೊತ್ತದ ಹಗರಣಗಳನ್ನು ಆಗಿನ‌ ಕಾಂಗ್ರೆಸ್ ಸರ್ಕಾರ ಮಾಡಿತ್ತು. ನಾವು  ಅವರ ಹಗರಣಗಳನ್ನು ಬಯಲು ಮಾಡಿದೆವು ಎಂದ ಅವರು, ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವ ಪಕ್ಷ, ಹೀಗಾಗಿ ನೋಟ್ ಬ್ಯಾನ್ ಆದ ಈ ದಿನವನ್ನು ಕಾಂಗ್ರೆಸ್ ನವರು  ಕರಾಳ ದಿನವನ್ನಾಗಿ ಆಚರಿಸುತ್ತಿದೆ ಎಂದು ಟೀಕಿಸಿದರು.

ಅವರು ತಮ್ಮ ಮಾತನ್ನು ಮುಂದುವರೆಸಿ, ಮೋದಿಯವರು ಪ್ರಾಮಾಣಿಕರ ಪರವಾಗಿ, ಬಡವರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈಗ ಭ್ರಷ್ಟಾಚಾರಕ್ಕಾಗೇ ಇದೆ, ಭ್ರಷ್ಟಾಚಾರಿಗಳಿಗಾಗೇ ಇದೆ ಎಂದು ಕುಟುಕಿದರು. ನೋಟು ಅಮಾನ್ಯೀಕರಣ ಎಂಬುದು ಭ್ರಷ್ಟಾಚಾರದ ವಿರುದ್ಧ ಒಬ್ಬ ಸಾಮಾನ್ಯ ಪ್ರಜೆಯ ಯುದ್ಧ, ಜನ ನೋಟ್ ಬ್ಯಾನ್ ಒಪ್ಪಿದ್ದಾರೆ ಎಂದು ಹೇಳಿದರು.

ಇನ್ನು ಪ್ಯಾರಡೈಸ್ ಪೇಪರ್ಸ್ ನಲ್ಲಿ ಕೇಂದ್ರ ಸಚಿವ ಜಯಂತ ಸಿನ್ಹಾ ಹೆಸರು ವಿಚಾರದ ಕುರಿತು ಮಾತನಾಡಿ, ಅವರೊಬ್ಬ ಕ್ಲೀನ್ ಮ್ಯಾನ್, ಅವರ ಮೇಲೆ ಯಾವುದೇ ಕೇಸ್ ಗಳು ಕೂಡ ಇಲ್ಲ, ಯಾವುದೋ ಪೇಪರ್ಸ್ ಲಿಸ್ಟ್ ನಲ್ಲಿ ಹೆಸರು ಬಂದಾಕ್ಷಣ ಅವರು ಅಪರಾಧಿ ಅಲ್ಲ, ಸೂಕ್ತವಾದ ತನಿಖೆ ನಡೆದ ಬಳಿಕ ಸತ್ಯ ಗೊತ್ತಾಗಲಿದೆ ಎಂದರು. ನಮ್ಮ ಸರ್ಕಾರ ಪನಾಮ ಲೀಕ್ಸ್, ಹೆಚ್.ಎಸ್.ಬಿಸಿ ಖಾತೆಗಳು ಮೇಲೂ ತನಿಖೆ ನಡೆದಿದೆ, 800 ಕೋಟಿ ಕಪ್ಪು ಹಣ ಕೂಡ ಇವುಗಳಿಂದ ಸಿಕ್ಕಿದೆ, ಅದೇ ರೀತಿ ಕಪ್ಪುಹಣವನ್ನ ಪತ್ತೆಹಚ್ಚಲು ಎಲ್ಲ ಪೇಪರ್ಸ್ ಗಳ ಲಿಸ್ಟ್ ಅನ್ನು ಪರಿಗಣಿಸುತ್ತೇವೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ