ಮಗಳ ಮದುವೆ ಮತ್ತು ಸಿಬಿಐ..!

Kannada News

08-11-2017

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ, ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.

ಮಗಳ ಅದ್ಧೂರಿ ಮದುವೆಯ ಖರ್ಚು ವೆಚ್ಚದ ವಿವರದ ಬಗ್ಗೆ ಸಿಬಿಐ ತನಿಖೆ ನಡೆಸುವ ಸಾಧ್ಯತೆ ಇದೆ. ಸಾಮಾಜಿಕ ಕಾರ್ಯಕರ್ತ ಟಪಾಲ್ ಗಣೇಶ್ ಅವರು, ಅದ್ಧೂರಿ ಮದುವೆಗಾಗಿ ಖರ್ಚು ಮಾಡಿದ ಹಣದ ಮೂಲ ಪತ್ತೆ ಮಾಡುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ನೋಟ್ ಬ್ಯಾನ್ ಆಗಿದ್ದ ಸಂದರ್ಭದಲ್ಲಿ ಜನ ಸಾಮಾನ್ಯರು ಹಣಕ್ಕಾಗಿ ಪರದಾಡುವ ಸಂದರ್ಭದಲ್ಲಿ ನೂರಾರು ಕೋಟಿ ಖರ್ಚು ಮಾಡಿ ರೆಡ್ಡಿ ಮಗಳ ಮದುವೆ ಮಾಡಿದ್ದಾರೆ ಎಂದು, ದೂರಲಾಗಿತ್ತು. ಈ ಕುರಿತು ಕೇಂದ್ರದಿಂದ ಸ್ಪಂದನೆ ದೊರೆತಿದ್ದು, ತನಿಖೆ ನಡೆಸುವಂತೆ ಸಿಬಿಐಗೆ ಕೇಂದ್ರ ವಿಚಕ್ಷಣಾ ದಳ ಪತ್ರ ಬರೆದಿದೆ. ಹೀಗಾಗಿ ಮಗಳ ಮದುವೆ ಖರ್ಚುವೆಚ್ಚದ ಬಗ್ಗೆ ಸಿಬಿಐ ತನಿಖೆ ನಡೆಸುವ ಸಾಧ್ಯತೆ ಇದ್ದು, ಇದರಿಂದ ಜನಾರ್ಧನರೆಡ್ಡಿಗೆ ಸಂಕಷ್ಟ ಎದುರಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ