ಆಸ್ತಿಗಾಗಿ ಯುವಕನ ಕೊಲೆ ಯತ್ನ

Kannada News

08-11-2017

ಬೆಂಗಳೂರು: ಆಸ್ತಿ ವಿಚಾರವಾಗಿ ಯುವಕನ ಮೇಲೆ ಲಾಂಗು-ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕ ಸುಭಾಷ್, ಈ ಹಿಂದೆ ಆಸ್ತಿ ವಿವಾದ ಸಂಬಂಧ, ಚಿಕ್ಕಪ್ಪನ ಮಗ ಅಪ್ಪು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಅದೃಷ್ಟವಶಾತ್ ಅಪ್ಪು ಸಾವಿನಿಂದ ಪಾರಾಗಿದ್ದ. ಇದೇ ದ್ವೇಷದಿಂದ ಅಪ್ಪು ತನ್ನ ಗ್ಯಾಂಗ್​ನೊಂದಿಗೆ ಗರುಡಾ ಮಾಲ್ ಬಳಿಯಿರುವ ಫುಟ್​​​ಬಾಲ್ ಸ್ಟೇಡಿಯಂ ಬಳಿ ಸುಭಾಷ್ ಮೇಲೆ ಅಟ್ಯಾಕ್​​ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಸುಭಾಷ್, ಸೆಂಟ್​​​ ಜಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ