‘ಒಕ್ಕಲಿಗರನ್ನು ಬಿಜೆಪಿ ನಿರ್ಲಕ್ಷಿಸಿಲ್ಲ’

Kannada News

08-11-2017

ಹಾಸನ: ಬಿಜೆಪಿಯ ಯಾವುದೇ ಸಂಸದರಾಗಲೀ, ಶಾಸಕರಾಗಲಿ, ಪುರಸಭೆಯ ಸದಸ್ಯರಾಗಲಿ ಚನ್ನರಾಯಪಟ್ಟಣದಲ್ಲಿರದಿದ್ದರೂ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 55 ಕೋಟಿಯಷ್ಟು ಹಣವನ್ನು ಇಲ್ಲಿನ ರಸ್ತೆಯ ಅಭಿವೃದ್ಧಿಗೆ ನೀಡಿದರು, ಇಲ್ಲಿನ ದೇವಾಲಯ ಅಭಿವೃದ್ಧಿಗೆ ಹಣ ನೀಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಹಾಸನದ ಚನ್ನರಾಯಪಟ್ಟಣದಲ್ಲಿ ನಿನ್ನೆ ನಡೆದ ಬಿಜೆಪಿಯ ಪರಿವರ್ತನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ, ಅವರು  ಚನ್ನರಾಯಪಟ್ಟಣದ ನುಗ್ಗೇಹಳ್ಳಿಯ ಏತ ನೀರಾವರಿ ಸೇರಿದಂತೆ ಅನೇಕ ನೀರಾವರಿ ಯೋಜನೆಗಳಿಗೆ ಯಡಿಯೂರಪ್ಪನವರು ಹಣ ನೀಡಿದ್ದರು, ಅನೇಕ ಕೆರೆ ತುಂಬಿಸುವ ಯೋಜನೆಗಳಿಗೆ ಹಣ ನೀಡಿದ್ದು ಯಡಿಯೂರಪ್ಪನವರೇ ಎಂದರು.

ಚನ್ನಪಟ್ಟಣಕ್ಕೆ ಯಡಿಯೂರಪ್ಪನವರು 200 ಕೋಟಿ ಕೊಟ್ಟಿದ್ದರಿಂದ ಸಿ.ಪಿ.ಯೋಗೇಶ್ವರ್ ಅವರು ಕೇವಲ ಒಂದು ವರ್ಷದಲ್ಲಿ ತಮ್ಮ ಕ್ಷೇತ್ರದ ಕೆರೆಗಳನ್ನೆಲ್ಲ ತುಂಬಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬಲಹೀನವಾಗಿದ್ದರಿಂದ ಹೊಸಬರಾದ ಶಿವನಂಜೇಗೌಡರನ್ನು ಸೇರಿಸಿಕೊಂಡು ಪಕ್ಷ ಕಟ್ಟುವಂತೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯು ನನ್ನನ್ನು ಸೇರಿದಂತೆ ಅಶೋಕ್ ಅವರಾಗಿರಬಹುದು, ಸಿ.ಟಿ.ರವಿಯವರಾಗಿರಬಹುದು, ನಮ್ಮಂತಹ ಸಾಮಾನ್ಯರನ್ನು ಸಚಿವರನ್ನಾಗಿ ಮಾಡಿದೆ. ಬಿಜೆಪಿಯು ಎಂದೂ ಒಕ್ಕಲಿಗರನ್ನು ನಿರ್ಲಕ್ಷಿಸಿಲ್ಲ, ನಮ್ಮಂತಹ ಸಾಮಾನ್ಯರು ಮೊದಲ ಬಾರಿಗೆ ಸಚಿವರಾಗಿದ್ದೇವೆಂದರೆ, ಬಿಜೆಪಿಯು ಒಕ್ಕಲಿಗರನ್ನು ಬೆಳೆಸಿದೆಯೆಂದೇ ಅರ್ಥ, ಈ ಬಾರಿ ಜಾತಿ ಮತ ಮರೆತು ಚನ್ನರಾಯಪಟ್ಟಣದ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಬೇಕಾಗಿ ಅವರು ವಿನಂತಿಸಿದರು.

 


ಸಂಬಂಧಿತ ಟ್ಯಾಗ್ಗಳು

Kannada News Karnataka ಚನ್ನರಾಯಪಟ್ಟಣ ಒಕ್ಕಲಿಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ