'ಟಿಪ್ಪು ಜಯಂತಿ ದುರ್ಗದ ಜನರಿಗೆ ಅಪಮಾನ’

Kannada News

08-11-2017

ಚಿತ್ರದುರ್ಗ: ನಾವು ಕಳೆದ ಮೂರು ವರ್ಷಗಳಿಂದ ಟಿಪ್ಪು ಜಯಂತಿ ವಿರೋಧಿಸುತ್ತಾ ಬಂದಿದ್ದೇವೆ, ಸೈದ್ಧಾಂತಿಕ ವಿಚಾರಗಳ ಮೂಲಕ ಇತಿಹಾಸವನ್ನಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ, ಶಾಂತಿಯುತವಾಗಿ ನಾವು ವಿರೋಧಿಸುತ್ತಾ ಬಂದಿದ್ದೇವೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ. ಹಾಗಾದರೆ ಕನ್ನಡ ಮತ್ತು ಸಂಸ್ಕೃತಿಗೆ ಟಿಪ್ಪುವಿನ ಕೊಡುಗೆ ಏನು ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು ಎಂದರು. ರೆವಿನ್ಯೂ ಇಲಾಖೆಯಲ್ಲಿ ಬಳಸುವ ಎಲ್ಲಾ ಶಬ್ದಗಳು ಟಿಪ್ಪು ಸುಲ್ತಾನನ ಪರ್ಶಿಯನ್ ಭಾಷೆ, ಹೀಗಾಗಿ ಕನ್ನಡಕ್ಕೆ ಅಪಮಾನ ಮಾಡಿದ ಟಿಪ್ಪುವಿನ ಜಯಂತಿಯನ್ನು ಯಾಕೆ ಮಾಡಬೇಕು..? ಎಂದು ಪ್ರಶ್ನಿಸಿದ್ದಾರೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಚಿತ್ರದುರ್ಗದ ಕೋಟೆಯ ಮೇಲೆ ದಾಳಿ ಮಾಡಿದ ಇತಿಹಾಸ ಇದೆ. ಒನಕೆ ಓಬವ್ವಳನ್ನು ಚೂರಿ ಇರಿದು ಸಾಯಿಸಿದ ಹೈದರಾಲಿಯ ಮಗನ ಜಯಂತಿ ಆಚರಣೆ ಮಾಡುವುದು ಎಷ್ಟು ಸರಿ, ಮದಕರಿ ನಾಯಕನನ್ನು ವಿಷಹಾಕಿ ಸಾಯಿಸಿದ ಟಿಪ್ಪುವಿನ ಜಯಂತಿ ಆಚರಣೆ ಮಾಡುವುದು ದುರ್ಗದ ಜನರಿಗೆ ಮಾಡುವ ಅಪಮಾನ ಎಂದು ಗುಡುಗಿದ್ದಾರೆ. ಇಷ್ಟೆಲ್ಲಾ ದೌರ್ಜನ್ಯ ಎಸಗಿದ ಟಿಪ್ಪುವಿನ ಜಯಂತಿ ಆಚರಿಸುವ ಮೂಲಕ ಅವರನ್ನು ಆದರ್ಶವಾಗಿಟ್ಟುಕೊಂಡರೆ ಬಿನ್ ಲ್ಯಾಡೆನ್ ನನ್ನು ಆದರ್ಶವಾಗಿಟ್ಟುಕೊಂಡಂತೆ ಎಂದಿದ್ದಾರೆ.

ಪೊಲೀಸರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವವರು ಯಾರು ಎಂಬುದನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತದಲ್ಲಿ ಪಾಕಿಸ್ತಾನದ ಬಾವುಟ ಹಾರಿಸುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಿ, ನಾವು ಕಾನೂನು ಉಲ್ಲಂಘನೆ ಮಾಡುವುದಿಲ್ಲ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Cialis 20 Compresse [url=https://cheapcialisll.com/]Cialis[/url] Cephalexin Dogs Side Effects Cialis Tipos De Viagra
  • Perloke
  • Hospitality, travel