ಖಾಸಗೀ ವಲಯಕ್ಕೂ ‘ಷಿ ಬಾಕ್ಸ್’

Kannada News

07-11-2017

ಬೆಂಗಳೂರು: ಕೆಲಸದ ಸ್ಥಳಗಳಲ್ಲಿ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಲ್ಲಿ ಮಹಿಳಾ ಉದ್ಯೋಗಿಗಳು ಆನ್‍ಲೈನ್ ದೂರು ದಾಖಲಿಸಬಹುದಾದ ಪೋರ್ಟಲ್‍ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಸೆಕ್ಶೂಯಲ್ ಹೆರಾಸ್‍ಮೆಂಟ್ ಎಲೆಕ್ಟ್ರಾನಿಕ್ ಬಾಕ್ಸ್ - ಷಿ ಬಾಕ್ಸ್ ಎನ್ನುವ ವ್ಯವಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಜಾಲತಾಣದಲ್ಲಿ ಸಚಿವೆ ಮೇನಕಾ ಗಾಂಧಿ ಉದ್ಘಾಟಿಸಿದ್ದಾರೆ. ಆನ್‍ಲೈನ್ ದೂರುಗಳನ್ನು ಸಚಿವಾಲಯದ ನಿರ್ದಿಷ್ಟ ವಿಭಾಗವೊಂದು ಪರಿಶೀಲಿಸಿ ಕಡ್ಡಾಯವಾಗಿ ಸಂಬಂಧಪಟ್ಟ ವಿಭಾಗಗಳು ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಮೊದಲು ಸರ್ಕಾರೀ ಕಚೇರಿಗಳಲ್ಲಿ ಮಾತ್ರ ಇದ್ದ ಈ ವ್ಯವಸ್ಥೆಯನ್ನು ಈಗ ಖಾಸಗೀ ವಲಯದ ಕೆಲಸದ ಸ್ಥಳಗಳಲ್ಲೂ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಆನ್‍ಲೈನ್ ಪೋರ್ಟಲ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ