ದಂಡ ಕಟ್ಟು ಎಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನ !

Kannada News

07-11-2017

ಬೆಂಗಳೂರು: ದಂಡ ಕಟ್ಟು ಎಂದು ಹೇಳಿದ್ದಕ್ಕೆ ಆಟೋ ಚಾಲಕನೊಬ್ಬ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಕೆಳಗೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಮಲ್ಲೇಶ್ವರಂನಲ್ಲಿ ನಡೆದಿದೆ.

ಮಹೇಶ್ ನಿಯಮ ಉಲ್ಲಂಘನೆ ಮಾಡಿದ ಆಟೋ ಚಾಲಕನಾಗಿದ್ದಾನೆ, ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ ಆಟೋಚಾಲಕನನ್ನು ಹಿಡಿದ ಸಂಚಾರ ಪೊಲೀಸರು, ಪರಿಶೀಲಿಸಿದಾಗ 32 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ ದಂಡ ಕಟ್ಟು ಎಂದು ಪೊಲೀಸರು ಕೇಳಿದ ಸಂಚಾರ ಪೊಲೀಸ್ ಠಾಣೆ ಮುಂಭಾಗ ಹೈಡ್ರಾಮ ಶುರು ಮಾಡಿದ್ದಾನೆ.

ನನ್ನ ಬಳಿ ದುಡ್ಡಿಲ್ಲ. ಮಗು ಆಸ್ಪತ್ರೆಯಲ್ಲಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಬಳಿಕ ಎರಡು ಪ್ರಕರಣದ ದಂಡ ಪಾವತಿಸುತ್ತೇನೆ ಉಳಿದಿದ್ದು ಆಮೇಲೆ ಕಟ್ಟುತ್ತೀನಿ ಎಂದು ಸಬೂಬು ಹೇಳಿದ್ದಾನೆ. ಪೊಲೀಸರು ಇದಕ್ಕೆ ಒಪ್ಪದೇ ಇದ್ದಾಗ ಬಸ್ ಅಡಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದಿಢೀರ್ ಆಗಿ ಆಟೋಚಾಲಕ ಬಸ್ ಅಡಿಗೆ ಬಿದ್ದಿದ್ದನ್ನು ನೋಡಿ ಸಾರ್ವಜನಿಕರು ಶಾಕ್ ಆಗಿದ್ದರು. ಕೊನೆಗೆ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಬಿಎಂಟಿಸಿ ಉಲ್ಲಂಘನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ