ಎಸ್‍ ಯುಸಿಐ(ಸಿ) ಶತಮಾನೋತ್ಸವ ಮೆರವಣಿಗೆ

Kannada News

07-11-2017

ಬೆಂಗಳೂರು: ರಷ್ಯಾದ ಮಹಾನ್ ನವೆಂಬರ್ ಸಮಾಜವಾದಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್)ಕಾರ್ಯಕರ್ತರು  ನಗರದಲ್ಲಿ ಮಂಗಳವಾರ ಬೃಹತ್ ಮೆರವಣಿಗೆ ನಡೆಸಿದರು. ನಗರದ ಮೈಸೂರು ಬ್ಯಾಂಕ್ ವತ್ತದಿಂದ ಕೆಜಿ ರಸ್ತೆ ಮಾರ್ಗವಾಗಿ ಪುರಭವನದವರೆಗೂ ಮೆರವಣಿಗೆ ನಡೆಸಿದ ಎಸ್‍ಯುಸಿಐ(ಸಿ) ಸದಸ್ಯರು, ಸಮಾಜವಾದಿ ಕ್ರಾಂತಿಯ ಶಾಶ್ವತವಾಗಿ ನೆಲೆಸಲಿ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ಪುರಭವನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಯುಸಿಐ(ಸಿ) ಕೇಂದ್ರ ಸಮಿತಿ ಸದಸ್ಯ ಕೆ.ರಾಧಾಕಷ್ಣ, 1917ರ ನವೆಂಬರ್ ತಿಂಗಳು ಇಡೀ ಜಗತ್ತಿನಲ್ಲಿ ತಲ್ಲಣ ಮೂಡಿಸಿದ ಐತಿಹಾಸಿಕ ಕಾಲವಾಗಿದೆ. ಇತಿಹಾಸ ಕಂಡರಿಯದಿದ್ದ ಸಮಾಜವಾದಿ ಮಹಾಕ್ರಾಂತಿ ರಷ್ಯಾದ ನೆಲದಲ್ಲಿ ನಡೆದು, ಹೊಸ ನಾಗರಿಕತೆ ಉದಯಿಸಿದ ಸಂದರ್ಭವಾಗಿದೆ. ರಷ್ಯಾದ ಬಡ ರೈತರು ಮತ್ತು ಕಾರ್ಮಿಕರು ಒಂದಾಗಿ ಮೊದಲಿಗೆ 1917ರ ಫೆಬ್ರವರಿಯಲ್ಲಿ ಜಾರ್ ದೊರೆ ದಬ್ಟಾಳಿಕೆ ಆಳ್ವಿಕೆ ಕೊನೆಗೊಳಿಸಿದರು. ಮುಂದೆ ಎಂಟು ತಿಂಗಳುಗಳ ಅವಧಿಯಲ್ಲಿ ಅಧಿಕಾರಕ್ಕೇರಿದ್ದ ಬಂಡವಾಳಶಾಹಿ ಸರ್ಕಾರವನ್ನು ಕೊನೆಗಾಣಿಸಿ ಈ ತಿಂಗಳಲ್ಲಿ ಎರಡು ಕ್ರಾಂತಿ ಮಾಡಲಾಯಿತು ಎಂದು ವಿವರಿಸಿದರು.

ಸಮಾಜವಾದಿ ಮಹಾಕ್ರಾಂತಿಯಿಂದ ಸ್ಫೂರ್ತಿಹೊಂದಿ, ಶೋಷಿತ ವರ್ಗವಾದ ರೈತ-ಕಾರ್ಮಿಕರು ಎಲ್ಲಾ ರೀತಿಯ ಶೋಷಣೆ, ಅಸಮಾನತೆ ತೊಡೆದುಹಾಕಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆ ತರುವ ಸಮಾಜವಾದಿ ವ್ಯವಸ್ಥೆಯ ಸ್ಥಾಪನೆ ಬಂಡವಾಳಶಾಹಿ ವಿರೋಧಿ-ಸಮಾಜವಾದಿ ಕ್ರಾಂತಿಗೆ ಅಣಿಯಾಗಬೇಕಿದೆ ಎಂದು ಎಸ್‍ ಯುಸಿಐ(ಸಿ) ಮುಖಂಡರು ಕರೆ ನೀಡಿದರು. ಮೆರವಣಿಗೆಯಲ್ಲಿ ಎಸ್‍ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯರಾದ ಕೆ.ಉಮಾ, ಹೆಚ್.ವಿ.ದಿವಾಕರ್,ಟಿ.ಎಸ್.ಸುನೀತ್, ಎ.ರಾಮಾಂಜನಪ್ಪ, ಸೋಮಶೇಶರ್, ಎಂ.ಎನ್.ಶ್ರೀರಾಂ, ಶಶಿಧರ್ ಹಾಗೂ ಕೆ.ಉಮಾ, ಶೇಖರ್, ದೀಪ್ತಿ ಸೇರಿ ಪ್ರಮುಖರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ