ಮೂವರ ಸಾವಿಗೆ ಕಾರಣವಾಯ್ತು ಜಗಳ !

Kannada News

07-11-2017

ಬೆಂಗಳೂರು: ನಗರದ ಹೊರವಲಯದ ಮಾದನಾಯಕನಹಳ್ಳಿಯ ಬೆಟ್ಟಹಳ್ಳಿಯಲ್ಲಿ ಸೊಸೆಯ ಜೊತೆಗಿನ ಜಗಳದಿಂದ ಬೇಸತ್ತು, ಅತ್ತೆ ಮಾವ ತಾವರೆಕೆರೆ ಬಳಿ, ಪತಿ ನಾದಿನಿ ಮತ್ತೊಂದು ಕಡೆ ವಿಷ ಸೇವಿಸಿದ್ದು ಅವರಲ್ಲಿ ಮೂವರು ಮೃತಪಟ್ಟರೆ ಒಬ್ಬರ ಸ್ಥಿತಿ ಗಂಭೀರವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮಾದನಾಯಕಹಳ್ಳಿಯ ಸಮೀಪದ ಬೆಟ್ಟಹಳ್ಳಿಯ ಜಮೀನೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವೆಂಕಟನರಸಪ್ಪ(80)ಪತ್ನಿ ತಾಯಮ್ಮ(70) ಅವರ ಪುತ್ರಿ ಹೊನ್ನಮ್ಮ ಮೃತಪಟ್ಟವರು. ತಂದೆ ತಾಯಿ ವಿಷ ಸೇವಿಸಿ ಆತ್ಮಹತ್ಯೆಮಾಡಿಕೊಂಡ ಸುದ್ದಿ ತಿಳಿದ ಅವರ ಪುತ್ರ ದೊಡ್ಡೇಗೌಡ(32) ಪುತ್ರಿ ಹೊನ್ನಮ್ಮ(35)ತಾವರೆಕೆರೆ ಬಳಿ ವಿಷ ಕುಡಿದು ಅಸ್ವಸ್ಥಗೊಂಡಿದ್ದಾರೆ ಕೂಡಲೇ ಅವರಿಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಹೊನ್ನಮ್ಮ ಮೃತಪಟ್ಟಿದ್ದಾರೆ.

ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡೇಗೌಡ ಅವರಿಗೆ  6 ತಿಂಗಳ ಹಿಂದೆ ಹೆಮ್ಮಿಗೆಪುರ ವನಜಾಕ್ಷಿ ಎನ್ನುವರ ಜೊತೆ ವಿವಾಹ ಮಾಡಿಕೊಡಲಾಗಿತ್ತು ಆದರೆ ಒಂದೆರೆಡು ತಿಂಗಳು ಪತಿಯ ಜೊತೆಗಿದ್ದ ವನಜಾಕ್ಷಿ ನಂತರ ಜಗಳ ತೆಗೆದು ತವರಿಗೆ ಹೋಗಿ ಸೇರಿಕೊಂಡಿದ್ದು ಎಷ್ಟು ಕರೆದರೂ ಪತಿಯ ಜೊತೆಗೆ ಬಂದಿರಲಿಲ್ಲ.

ಪತಿಯ ವರ್ತನೆಯಿಂದ ಬೇಸತ್ತು ದೊಡ್ಡೇಗೌಡ ಮಾದನಾಯಕಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ದಂಪತಿಯನ್ನು ಕರೆಸಿ ರಾಜಿ-ಪಂಚಾಯ್ತಿ ಮಾಡಿ ಪತಿಯ ಜೊತೆಗಿರಲು ವನಜಾಕ್ಷಿಯನ್ನು ಒಪ್ಪಿಸಲಾಗಿತ್ತು. ಮತ್ತೆ ಒಂದೆರಡು ದಿನವಿದ್ದ ಆಕೆ ಮತ್ತೆ ಜಗಳ ತೆಗೆದು ತವರು ಸೇರಿಕೊಂಡಿದ್ದಳು.

ಸೊಸೆ ವರ್ತನೆಯಿಂದ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದನ್ನು ಮನಸ್ಸಿಗೆ ತೀವ್ರವಾಗಿ ಹಚ್ಚಿಕೊಂಡಿದ್ದ ವೆಂಕಟನರಸಪ್ಪ, ತಾಯಮ್ಮ ದಂಪತಿ ಕೆಲಸ ಮಾಡುತ್ತಿದ್ದ ಜಮೀನಿನ ಶೆಡ್‍ನಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದು, ಅಕ್ಕ ಹೊನ್ನಮ್ಮನ ಜೊತೆ ಹೋಗಿದ್ದ ದೊಡ್ಡೇಗೌಡ ಸುದ್ದಿ ತಿಳಿದು ಅವರಿಬ್ಬರೂ ಸೇರಿ ವಿಷ ಕುಡಿದ್ದಿದಾರೆ. ಅದರಲ್ಲಿ ಹೊನ್ನಮ್ಮ ಮೃತಪಟ್ಟರೆ ಅಸ್ವಸ್ಥಗೊಂಡಿರುವ ದೊಡ್ಡೇಗೌಡ ಅವರನ್ನು ನಗರದ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ನೀಡಲಾಗುತ್ತಿದೆ. ಮಾದನಾಯಕನಹಳ್ಳಿ ಹಾಗೂ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಜಗಳ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ