‘ಸಿಎಂ ಗಮನಕ್ಕೆ ಫೋನ್ ಕದ್ದಾಲಿಕೆ’

Kannada News

07-11-2017

ಚಿಕ್ಕಮಗಳೂರು: ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಫೋನ್ ಕದ್ದಾಲಿಕೆ ವಿಚಾರವನ್ನು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದರು.

ಸೆಂಟ್ರಲ್ ಏಜೆನ್ಸಿಗಳು ಫೋನ್ ಟ್ರ್ಯಾಪ್ ಮಾಡಿವೆ. ತಮ್ಮ ಚಲನವಲನಗಳ ಮೇಲೆ ಕಣ್ಣೀಡಲು ಹೀಗೆ ಮಾಡುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಆರೋಪಿಸುತ್ತಿದ್ದಾರೆ. ಆದರೆ ಆದಾಯ ಇಲಾಖೆ, ಇಡಿ ಅಥವಾ ಸಿಬಿಐ ಈ ರೀತಿ ಮಾಡುತ್ತಿದೆಯೇ ಎಂದು ತಿಳಿದಿಲ್ಲ. ಕೇಂದ್ರ ಸರ್ಕಾರ ಸಿಬಿಐ, ಆದಾಯ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ನಾವು ಹಲವು ಬಾರಿ ಆರೋಪಿಸಿದ್ದೇವೆ. ಪರಿಶೀಲನೆ ನಂತರ ಎಲ್ಲವೂ ತಿಳಿಯಲಿದೆ ಎಂದು ಪರಮೇಶ್ವರ್ ಅವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ಜಲ ಸಂಪನ್ಮೂಲ ಟ್ರ್ಯಾಪ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ