ಗಾಂಜಾ ಮಾರಿ ಜೈಲು ಸೇರಿದ ವ್ಯಕ್ತಿ

Kannada News

07-11-2017

ಬೆಂಗಳೂರು: ಇಂದಿರಾ ನಗರದ ಡಬಲ್ ರಸ್ತೆಯ ಯಮಹಾ ಥಾಮ್ಸನ್ ಮ್ಯೂಸಿಕ್ ವಲ್ರ್ಡ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 90 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಹಲಸೂರಿನ ಬೆಂಗಪರಶುರಾಮ್ ಗಾರ್ಡನ್‍ ನ ವಿಕ್ರಮನ್ ನಾಯರ್(28)ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 90 ಸಾವಿರ ಮೌಲ್ಯದ 1 ಕೆ.ಜಿ. 200 ಗ್ರಾಂ.ಗಾಂಜಾ, ಮೊಬೈಲ್,ಹಾಗೂ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ಜೊತೆ ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಆರೋಪಿಗಳು ಬೇರೆಡೆಯಿಂದ ಗಾಂಜಾವನ್ನು ಖರೀದಿ ಮಾಡಿ ನಗರಕ್ಕೆ ತಂದು ಚಿಕ್ಕ ಪೊಟ್ಟಣಗಳಾಗಿ ಕಟ್ಟಿ ಮಾರಾಟ ಮಾಡುತ್ತಿದ್ದು,  ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿ ಬಂಧಿಸಿ, ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

 


ಸಂಬಂಧಿತ ಟ್ಯಾಗ್ಗಳು

Kannada News Karnataka ಗಾಂಜಾ ಇಂದಿರಾನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ