ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ

Kannada News

07-11-2017

ಕೊಪ್ಪಳ: ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡನ ಮನೆ ಎದುರು ವಾಮಾಚಾರ ನಡೆದಿದೆ. ಕಾಂಗ್ರೆಸ್ ಮುಖಂಡ ದಾಸರೆಡ್ಡಿ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಲಿಗೆ ವಾಮಾಚಾರದ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ನೇತು ಹಾಕಿದ್ದಾರೆ.

ದಾಸರೆಡ್ಡಿ ಕುಟುಂಬದವರು ಮನೆಗೆ ವಾಪಸ್ಸಾದಾಗ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಸಂಶಯಾಸ್ಪದ ವಸ್ತುಗಳನ್ನು ಕಂಡು ದಾಸರೆಡ್ಡಿ ಕುಟುಂಬ ಆತಂಕಕ್ಕೆ ಒಳಗಾಗಿದೆ. ದುಷ್ಕರ್ಮಿಗಳು ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ, ಬಟ್ಟೆ, ಬಾಳೆಹಣ್ಣು, ಎಲೆ-ಅಡಿಕೆ, ಕೊಬ್ಬರಿ ಬಟ್ಟಲು ಹಾಗೂ ನಾಣ್ಯಗಳನ್ನು ಇರಿಸಿದ್ದಾರೆ. ರಾಜಕೀಯ ದ್ವೇಷದಿಂದಲೇ ದುಷ್ಕರ್ಮಿಗಳು ಹೀಗೆ ವಾಮ ಮಾರ್ಗ ಹಿಡಿದಿದ್ದಾರೆಂದು ದಾಸರೆಡ್ಡಿ ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

Kannada News Karnataka ವಾಮಾಚಾರ ಭಾಗ್ಯನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ