ಬಸ್ ನಂಬರ್ ನಲ್ಲಿ ಅಂಥದ್ದೇನಿದೆ..?

Kannada News

07-11-2017

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಇಂದು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರ ಪರ್ವದ ವಿಕಾಸ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ವಿಕಾಸ ಯಾತ್ರೆಯ ಬಸ್‌ನ ವಿನ್ಯಾಸಕ್ಕೆ ಒಂದು ಕೋಟಿ ರೂ.ಹಣ ಖರ್ಚು ಮಾಡಲಾಗಿದೆ. ಈ ಬಸ್‌ ನ ನೋಂದಣಿ ಸಂಖ್ಯೆ ಕೆ.ಎ-59-ಎಂ-3366 ಆಗಿದೆ. ಇನ್ನೂ ಹೆಚ್.ಡಿ.ಕುಮಾರ ಸ್ವಾಮಿ ಬಳಸುವ ಬಿಳಿ ಬಣ್ಣದ ಫಾರ್ಚುನರ್ ಕಾರ್ ನಂಬರ್ ಕೆಎ-42-ಪಿ-3366 ಆಗಿದೆ. ಈ ಎರಡು ವಾಹನಗಳ ನಂಬರ್ ಒಂದೇ ಆಗಿರುವುದು ಕುತೂಹಲ ಮೂಡಿಸಿದೆ.

ಈ ನಂಬರ್ ವಿಶೇಷವೇನು: ಸಂಖ್ಯೆ 6 ಶುಕ್ರ ದೆಸೆ, ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಜೋತಿಷ್ಯರೊಬ್ಬರು 6 ಸಂಖ್ಯೆಯ ವಾಹನವನ್ನ ಬಳಸುವಂತೆ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ವಿಕಾಸ ಯಾತ್ರೆಯ ವಾಹನದ ನೋಂದಣಿ ಸಂಖ್ಯೆ ಹಾಗೂ ಕುಮಾರಸ್ವಾಮಿ ಬಳಸುವ ಕಾರಿನ ನಂಬರ್‌ ಒಂದೇ ಆಗಿದೆ ಎನ್ನಲಾಗ್ತಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ನಂಬರ್ ನೋಂದಣಿ ಸಂಖ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ