ಹೆಣ ನೋಡಲು ಬಂದವನ ದುರ್ಮರಣ..

Kannada News

07-11-2017

ಮಂಡ್ಯ: ಸಂಬಂಧಿಕರ ಸಾವಿನ ಹಿನ್ನೆಲೆ, ವ್ಯಕ್ತಿಯೊಬ್ಬರು ಮಂಡ್ಯದ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿ ಗ್ರಾಮಕ್ಕೆ ಬಂದಿದ್ದು, ನಂತರ ಅಲ್ಲಿಂದ ವಾಪಸ್ಸಾಗುವಾಗ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯು ಮದ್ದೂರು ಸಮೀಪದ ಉಪ್ಪಿನಕೆರೆ ಗೇಟ್ ಬಳಿ ನಡೆದಿದೆ.

ಮೃತರನ್ನು ಚನ್ನಪಟ್ಟಣ ಟೌನ್ ನಿವಾಸಿ ರವಿ (35) ಎಂದು ಗುರುತಿಸಿದ್ದು, ಇವರು ಮಂಗಳೂರಿನ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಿಂಬದಿ ಸವಾರ ಪುಟ್ಟಸ್ವಾಮಿ (61) ಎಂದು ಹೇಳಲಾಗಿದೆ.

ಸಂಬಂಧಿಕರೊಬ್ಬರ ಸಾವಿನ ಹಿನ್ನೆಲೆಯಲ್ಲಿ ತಂದೆ ಹಾಗೂ ಮಗನು ಬೈಕ್‍ನಲ್ಲಿ ಗುರುದೇವರಹಳ್ಳಿ ಗ್ರಾಮಕ್ಕೆ ಬಂದಿದ್ದು, ನಂತರ ಅಲ್ಲಿಂದ ವಾಪಸ್ ತೆರಳುತ್ತಿದ್ದಾಗ ಮಾರುತಿ ಆಮ್ನಿ ಕಾರು ವೇಗವಾಗಿ ಬಂದು ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮಗ ಮೃತಪಟ್ಟಿದ್ದರೆ, ತಂದೆ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಮದ್ದೂರು ಚನ್ನಪಟ್ಟಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ