ಕಾಂಗ್ರೆಸ್: ‘ಎರಡೆರಡು ಯಾತ್ರೆ ಬೇಡ’

Kannada News

07-11-2017

ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆ ಮತ್ತು ಜೆಡಿಎಸ್​ ನ ‘ಕುಮಾರ ಪರ್ವ’ ಯಾತ್ರೆಗೆ ಪರ್ಯಾಯವಾಗಿ ರಾಜ್ಯದ ಜನರ ಬಳಿ ಹೋಗಲು ಸಜ್ಜಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಪ್ರತ್ಯೇಕ ಯಾತ್ರೆಗಳಿಗೆ ಪಕ್ಷದಲ್ಲೇ ಅಪಸ್ವರ ವ್ಯಕ್ತವಾಗಿದೆ.

ಪಕ್ಷ ಹಾಗೂ ಸರ್ಕಾರದಿಂದ ಪ್ರತ್ಯೇಕ ಯಾತ್ರೆಯ ಅಗತ್ಯವಿಲ್ಲ ಎಂದಿರುವ ಹಿರಿಯ ಕಾಂಗ್ರೆಸ್ಸಿಗರು, ಒಂದೇ ಬಾರಿ ಅದ್ದೂರಿ ಯಾತ್ರೆ ನಡೆಸುವುದಕ್ಕಾಗಿ ಹೈಕಮಾಂಡ್​ನಿಂದ ಅನುಮತಿ ಪಡೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಪ್ರತ್ಯೇಕ ಯಾತ್ರೆಗಳಿಂದ ಪಕ್ಷದಲ್ಲಿನ ಒಗ್ಗಟ್ಟು, ನಾಯಕರ ನಡೆಯ ಬಗ್ಗೆಯೇ ಮತದಾರರಲ್ಲಿ ಗೊಂದಲ ಮೂಡುತ್ತದೆ ಎಂದಿದ್ದಾರೆ. ಅಲ್ಲದೇ ಪಕ್ಷ ಹಾಗೂ ಸರ್ಕಾರದಿಂದ ಒಂದೇ ಯಾತ್ರೆ ನಡೆಸುವಂತೆ ಹೈಕಮಾಂಡ್​ಗೆ ಸಲಹೆ ನೀಡಲಾಗಿದೆ. ಅಧಿವೇಶನದ ಬಳಿಕ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜೊತೆ ವಿಸ್ತೃತ ಚರ್ಚೆ ನಡೆಸಿ, ಹೈಕಮಾಂಡ್​ ನಿಂದ ಸೂಚನೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಕೆಪಿಸಿಸಿ ಹೈಕಮಾಂಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ