ನದಿಯಲ್ಲಿ ಐವರು ಮಕ್ಕಳು ನೀರುಪಾಲು..

Kannada News

07-11-2017

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಅರಳ ಮುಲ್ಲರಪಟ್ನದ ಫಲ್ಗುಣಿ ನದಿಯಲ್ಲಿ ಐವರು ಮಕ್ಕಳು ನೀರುಪಾಲಾಗಿದ್ದಾರೆ. ಮೃತರನ್ನು ಅಸ್ಲಂ, ಸವದ್, ಮುದಾಸ್ಸಿರ್, ರಮೀಜ್ ಮತ್ತು ಅಜ್ಮಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 17ರಿಂದ 18 ವರ್ಷ ವಯಸ್ಸಿನವರಾಗಿದ್ದಾರೆ.

ಅಕ್ಕಪಕ್ಕದ ಮನೆಯವರಾದ ಇವರು ನಿನ್ನೆ ಸಂಜೆಯೇ ನಾಪತ್ತೆಯಾಗಿದ್ದರು. ಮಂಗಳೂರಿಗೆ ಜೊತೆಯಲ್ಲಿ ತೆರಳಿರಬಹುದು ಎಂದು ಮನೆ ಮಂದಿ ಭಾವಿಸಿದ್ದರು. ಆದರೆ ಇಂದು ಬೆಳಿಗ್ಗೆ ಅವರು ನೀರಲ್ಲಿ ಕೊಚ್ಚಿಹೋದುದು ಮನವರಿಕೆಯಾಗಿದೆ. ಮಕ್ಕಳ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದ್ದು, ಬೆಳಿಗ್ಗೆ 8 ಗಂಟೆ ಹೊತ್ತಿಗೆ ಒಂದು ಮೃತದೇಹ ಪತ್ತೆಯಾಗಿದೆ, ಇನ್ನು ಇತರರ ಮೃತದೇಹಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


ಸಂಬಂಧಿತ ಟ್ಯಾಗ್ಗಳು

Kannada News Karnataka ಫಲ್ಗುಣಿ ನದಿ ನೀರುಪಾಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ